ಮಂಗಳವಾರ, ಮೇ 11, 2021
25 °C

ಭಾರತೀಯ ಮೂಲದ ವೈದ್ಯನಿಗೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಪಿಟಿಐ): ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ಚಿತ್ರಗಳನ್ನು ಸೆರೆಹಿಡಿಯುವುದಕ್ಕಾಗಿ ಸ್ನಾನಗೃಹಗಳಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದ ಭಾರತೀಯ ಮೂಲದ ಹೃದ್ರೋಗ ತಜ್ಞರೊಬ್ಬರು ಇಂಗ್ಲೆಂಡ್‌ನಲ್ಲಿ 10 ವರ್ಷಗಳ `ಸುಧಾರಣಾ ಕಟ್ಟುಪಾಡು ಶಿಕ್ಷೆ~ಗೆ ಗುರಿಯಾಗಿದ್ದಾರೆ.ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿಯಾಗಿರುವ 33 ವರ್ಷದ ವಿವೇಕ್ ಬಾಳಿಗ ಶಿಕ್ಷೆಗೆ ಗುರಿಯಾದವರು. ಲೀಡ್ಸ್‌ನ ನ್ಯಾಯಾಲಯದ ಎದುರು ಹಾಜರಾದ ಬಾಳಿಗ ಅವರಿಗೆ, ಮೂರು ವರ್ಷಗಳ ಕಾಲ ಸಮುದಾಯ ಸೇವೆ ಮಾಡುವಂತೆ ನ್ಯಾಯಾಧೀಶ ಸ್ಕಾಟ್ ವೋಸ್ಟೆನ್‌ಹೋಲ್ಮ್ ಸೂಚಿಸಿದ್ದಾರೆ.ಇಬ್ಬರು ಸಹೋದ್ಯೋಗಿ ವೈದ್ಯರ ನಗ್ನ ಚಿತ್ರಗಳನ್ನು  ಸೆರೆಹಿಡಿರುವುದಾಗಿ ಬಾಳಿಗ ತಪ್ಪೊಪ್ಪಿಕೊಂಡಿದ್ದಾರೆ.  ಜೀವನದ ಘೋರ ತಪ್ಪನ್ನು ಮಾಡಿರುವುದಾಗಿ, ಇದನ್ನು ನಾನೇ ಕ್ಷಮಿಸುವುದಿಲ್ಲ ಎಂದೂ ಅವರು ಸಹೋದ್ಯೋಗಿಯೊಬ್ಬರಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.