ಮಂಗಳವಾರ, ಏಪ್ರಿಲ್ 20, 2021
32 °C

ಭಾರತೀಯ ವಿಜ್ಞಾನಿ ಹೆಸರು ಶಿಫಾರಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |ವಾಷಿಂಗ್ಟನ್ (ಪಿಟಿಐ): ನ್ಯೂಯಾರ್ಕ್‌ನ ಬಫೆಲೊದಲ್ಲಿರುವ ಪ್ರತಿಷ್ಠಿತ ದಿ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್‌ನ (ಎಸ್‌ಯುಎನ್‌ವೈ) ಅಧ್ಯಕ್ಷ ಸ್ಥಾನಕ್ಕೆ ಭಾರತೀಯ ಮೂಲದ ಖ್ಯಾತ ಗಣಕ ವಿಜ್ಞಾನಿ ಸತೀಶ್ ಕೆ. ತ್ರಿಪಾಠಿ ಅವರ ಹೆಸರನ್ನು ಶಿಫಾರಸು ಮಾಡಲಾಗಿದೆ.ಎಸ್‌ಯುಎನ್‌ವೈನ ಕುಲಪತಿ ನ್ಯಾನ್ಸಿ ಎಲ್ ಜಿಂಫರ್ ಅವರು ವಿವಿಯ ವಿಶ್ವಸ್ಥ ಮಂಡಳಿಗೆ ವಿಶೇಷ ಸಭೆಯನ್ನು ಮುಂದಿನ ತಿಂಗಳು ನಡೆಸಲು ಸೂಚಿಸಿದ್ದು, ಅಲ್ಲಿ ತ್ರಿಪಾಠಿ ಅವರನ್ನು ಅಧಿಕೃತವಾಗಿ ವಿವಿಯ ಅಧ್ಯಕ್ಷರನ್ನಾಗಿ ನೇಮಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ. ಎಸ್‌ಯುಎನ್‌ವೈ ಅಧ್ಯಕ್ಷ ಸ್ಥಾನಕ್ಕೆ ತ್ರಿಪಾಠಿ ಅವರು  ನೇಮಕಗೊಂಡರೆ ವಿದೇಶಿಯರೊಬ್ಬರು ಪ್ರಪ್ರಥಮ ಬಾರಿಗೆ ಈ ವಿವಿಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದಂತಾಗುತ್ತದೆ. ಆ ಮೂಲಕ ಅವರು ವಿವಿಯ 15ನೇ ಅಧ್ಯಕ್ಷರೂ ಆಗುತ್ತಾರೆ.‘ಪ್ರತಿಷ್ಠಿತ ಎಸ್‌ಯುಎನ್‌ವೈನ ಅಧ್ಯಕ್ಷ ಸ್ಥಾನಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿ ಗೌರವ ತೋರಿದ್ದಾರೆ. ಈ ಹೊಣೆಗಾರಿಕೆ ನನಗೆ ಸಿಕ್ಕ ಬಹು ದೊಡ್ಡ ಮನ್ನಣೆ’ ಎಂದು 60 ವರ್ಷ ವಯಸ್ಸಿನ ತ್ರಿಪಾಠಿ ಹೇಳಿದ್ದಾರೆ.


 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.