ಭಾನುವಾರ, ಮೇ 22, 2022
26 °C

ಭಾರತೀಯ ವಿದ್ಯಾರ್ಥಿಗಳಿಗೆಪರ್ಯಾಯ ವ್ಯವಸ್ಥೆ: ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್/ನವದೆಹಲಿ (ಪಿಟಿಐ): ಲಂಡನ್‌ನಲ್ಲಿನ ಬಿಸಿನೆಸ್ ಸ್ಕೂಲ್ ಮುಚ್ಚಿದ್ದರಿಂದಾಗಿ ತೊಂದರೆಗೆ ಒಳಗಾಗಿರುವ ಅನೇಕ ಭಾರತೀಯ ವಿದ್ಯಾರ್ಥಿಗಳನ್ನು ಇತರ ಕಾಲೇಜುಗಳಿಗೆ ಸೇರ್ಪಡೆ ಮಾಡಲಾಗುವುದು ಎಂದು ಬ್ರಿಟನ್ ಮಂಗಳವಾರ ಹೇಳಿದೆ.

ಈ ಮಧ್ಯೆ ಭಾರತವು ತನ್ನ ವಿದ್ಯಾರ್ಥಿಗಳಿಗೆ ವ್ಯತಿರಿಕ್ತ ಪರಿಣಾಮ ಬೀರದಂತೆ `ಎಲ್ಲಾ ಅಗತ್ಯ ಕ್ರಮ~ ಕೈಗೊಳ್ಳುವುದಾಗಿ ಭಾರತ ತಿಳಿಸಿದೆ.

ಎಂಬಿಎ ಮತ್ತು ಇತರ ಕೋರ್ಸ್‌ಗಳನ್ನು ನೀಡುತ್ತಿದ್ದ ಪುಣೆ ಮೂಲದ ಟಾಸ್‌ಮ್ಯಾಕ್‌ನ ಲಂಡನ್ ಕಾಲೇಜನ್ನು ಕಳೆದ ವಾರ ಮುಚ್ಚಲಾಗಿತ್ತು. ಈ ಕಾಲೇಜು ವೇಲ್ಸ್ ವಿವಿ ಮಾನ್ಯತೆ ಪಡೆದಿತ್ತು.

ತೊಂದರೆಗೊಳಗಾದ ವಿದ್ಯಾರ್ಥಿಗಳಿಗೆ ಇತರ ಕಾಲೇಜುಗಳಿಗೆ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ವಿಶ್ವವಿದ್ಯಾನಿಲಯ ತಿಳಿಸಿದೆ.

ಸುಮಾರು 200 ಭಾರತೀಯ ವಿದ್ಯಾರ್ಥಿಗಳು ಇಲ್ಲಿ ದಾಖಲಾಗಿದ್ದು ಇವರಿಗೆ ಯಾವುದೇ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳಲಾಗವುದು ಎಂದು ನವದೆಹಲಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರೊಬ್ಬರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.