ಬುಧವಾರ, ಏಪ್ರಿಲ್ 14, 2021
23 °C

ಭಾರತೀಯ ವೈದ್ಯಕೀಯ ಮಂಡಳಿ ಸದಸ್ಯತ್ವ: ಡಾ. ದೇವಿಶೆಟ್ಟಿ ಮನವಿ ತಿರಸ್ಕೃತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕೆಲಸದ ಒತ್ತಡದ ಕಾರಣ ಭಾರತ ವೈದ್ಯಕೀಯ ಮಂಡಳಿಯ (ಎಂಸಿಐ) ಗವರ್ನರುಗಳ ಸದಸ್ಯತ್ವ ತ್ಯಜಿಸಲು ತಾವು ನೀಡಿದ್ದ ಮನವಿ ತಿರಸ್ಕೃತಗೊಂಡಿತು ಎಂದು ಸುಪ್ರಸಿದ್ಧ ಹೃದಯರೋಗ ತಜ್ಞ ಡಾ. ದೇವಿಶೆಟ್ಟಿ ಮಂಗಳವಾರ ಹೇಳಿದ್ದಾರೆ.

‘ನನಗೆ ಮುಂದುವರಿಯಲು ಸಾಧ್ಯವಾಗದೇ ಇರಬಹುದು ಎಂದು ನಾನು ಮನವಿ ಸಲ್ಲಿಸಿದ್ದೆ. ನನ್ನ ಸಹೋದ್ಯೋಗಿಗಳ ಜತೆ ಈ ಬಗ್ಗೆ ಮಾತನಾಡಿದ್ದೆ. ಆದರೆ ನನ್ನನ್ನು ಬಿಡಲು ಅವರು ಒಪ್ಪದ ಕಾರಣ ಮಂಡಳಿಯಲ್ಲಿ ಮುಂದುವರಿಯಲು ನಿರ್ಧರಿಸಿದೆ’ ಎಂದು ದೇವಿಶೆಟ್ಟಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಭಾರತ ವೈದ್ಯಕೀಯ ಮಂಡಳಿಯ ವೈದ್ಯರ ಮಂಡಳಿಯ ಅಧಿಕಾರಾವಧಿಯನ್ನು ಒಂದು ವರ್ಷದವರೆಗೆ ವಿಸ್ತರಿಸಲು ಕೇಂದ್ರ ಸಂಪುಟ ನಿರ್ಧರಿಸಿತ್ತು. ವೈದ್ಯಕೀಯ ಸಂಶೋಧಕ ಡಾ. ಎಸ್.ಕೆ. ಸರೀನ್ ನೇತೃತ್ವದ ಈಗಿನ ಎಂಸಿಐ ಮಂಡಳಿಯ ಅಧಿಕಾರಾವಧಿ ಮೇ 14ರಂದು ಕೊನೆಗೊಳ್ಳಲಿದೆ.

ಆದರೆ ಮಂಡಳಿಯಲ್ಲಿ ಹೊಸ ಸದಸ್ಯರನ್ನು ನೇಮಿಸಬೇಕೋ ಅಥವಾ ಈಗಿನವರನ್ನೇ ಮುಂದುವರಿಸಬೇಕೋ ಎಂಬ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಇನ್ನೂ ನಿರ್ಧರಿಸಬೇಕಿದೆ.

ಕಳೆದ ವರ್ಷ ಎಂಸಿಐ ಅಧ್ಯಕ್ಷರಾಗಿದ್ದ ಕೇತನ್ ದೇಸಾಯಿ ಅವರು ರೂ 2 ಕೋಟಿ ಲಂಚ ಪಡೆದ ಆರೋಪದ ಮೇಲೆ ಬಂಧನಕ್ಕೆ ಒಳಗಾದ ನಂತರ ಈಗಿನ ಮಂಡಳಿಯನ್ನು ರಚಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.