ಶುಕ್ರವಾರ, ಮೇ 14, 2021
21 °C

ಭಾರತೀಯ ಸಿನಿಮಾಕ್ಕೆ ರಷ್ಯದಲ್ಲಿ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಸ್ಕೊ (ಪಿಟಿಐ): ರಷ್ಯದಲ್ಲಿ ಎರಡು ದಶಕಗಳಿಂದ ಸ್ಥಗಿತಗೊಂಡಿರುವ ಭಾರತೀಯ ಚಲನಚಿತ್ರಗಳ ಪ್ರದರ್ಶನಕ್ಕೆ ಪುನಃ ಅವಕಾಶ ನೀಡುವಂತೆ ಸ್ಥಳೀಯರು ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಅವರನ್ನು ಒತ್ತಾಯಿಸಿದ ಅಪರೂಪದ ಘಟನೆ ಶುಕ್ರವಾರ ನಡೆದಿದೆ. ರಷ್ಯ-ಭಾರತದ ನಡುವಿನ ರಾಜತಾಂತ್ರಿಕ ಸಂಬಂಧಗಳಿಗೆ 60 ವರ್ಷ ತುಂಬಿದ ಸಂದರ್ಭ ಇಲ್ಲಿ ಏರ್ಪಡಿಸಲಾಗಿದ್ದ ಭಾರತೀಯ ಉತ್ಸವ ಉದ್ಘಾಟನೆಗೆ ಆಗಮಿಸಿದ ಕೃಷ್ಣ, ಭಾರತೀಯ ಚಲನಚಿತ್ರಗಳೆಡೆಗೆ ರಷ್ಯನ್ನರ ಪ್ರೀತಿ ಕಂಡು ದಂಗಾದರು.ಒಂದು ಕಾಲಕ್ಕೆ ತುಂಬಿದ ಗೃಹಗಳಲ್ಲಿ ರಷ್ಯ ಭಾಷೆಯ ಅಡಿ ಟಿಪ್ಪಣಿ (ಸಬ್ ಟೈಟಲ್)ಗಳೊಂದಿಗೆ ಇಲ್ಲಿ ಪ್ರದರ್ಶನ ಕಾಣುತ್ತಿದ್ದ ಹಿಂದಿ ಚಲನಚಿತ್ರಗಳ ಪ್ರದರ್ಶನ ಸುಮಾರು ಎರಡು ದಶಕಗಳ ಹಿಂದೆ ಏಕಾಏಕಿ ನಿಂತುಹೋಗಿದೆ. 1992ರಿಂದ ಇಲ್ಲಿಯವರೆಗೂ ಒಂದೇ ಒಂದು ಭಾರತೀಯ ಸಿನಿಮಾ ಇಲ್ಲಿ ಬಿಡುಗಡೆಯಾಗಿಲ್ಲ. ಹೀಗಾಗಿ ಹಿಂದಿ ಸಿನಿಮಾಗಳ ನಕಲಿ ಸಿ.ಡಿ ಮತ್ತು ಡಿವಿಡಿ ಹಾವಳಿ ಇಲ್ಲಿ ಹೆಚ್ಚಾಗಿದೆ.ತೀರಾ ಇತ್ತೀಚೆಗೆ ಬಿಡುಗಡೆಯಾದ ಚಿತ್ರಗಳ ಸಿ.ಡಿ, ಡಿವಿಡಿಗಳೂ ಲಭ್ಯ. `ಎರಡೂ ರಾಷ್ಟ್ರಗಳು ಆದಷ್ಟೂ ಬೇಗ ಈ ಕಾರ್ಯೋನ್ಮುಖವಾಗಬೇಕು~ ಎಂದು ಉತ್ಸವದ ನಿರ್ದೇಶಕಿ ಲ್ಯುಡ್ಮಿಲಾ ಲಿಪೇಕೊ ಮನವಿ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.