ಭಾರತ್ ನಿರ್ಮಾಣ ಆಂದೋಲನ 9ರಿಂದ

7

ಭಾರತ್ ನಿರ್ಮಾಣ ಆಂದೋಲನ 9ರಿಂದ

Published:
Updated:

ಬಾಗಲಕೋಟೆ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತಂತೆ ಮೂರು ದಿನಗಳ ಮಾಹಿತಿ ಆಂದೋಲನ ಕಾರ್ಯಕ್ರಮ  ಮಾರ್ಚ 9 ರಿಂದ 11ರ ವರೆಗೆ ಮುಧೋಳದ ರನ್ನ ಕ್ರೀಡಾಂಗಣದಲ್ಲಿ ನಡೆಸಲು ಜಿಲ್ಲಾಧಿಕಾರಿ ಎ.ಎಂ.ಕುಂಜಪ್ಪ  ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ  ಮಂಗಳವಾರ ಜರುಗಿದ ಎರಡನೇ ಪೂರ್ವಸಿದ್ದತಾ ಸಭೆಯಲ್ಲಿ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಕುರಿತು ವಿವಿಧ ಇಲಾಖೆಗಳ ವಸ್ತು ಪ್ರದರ್ಶನ, ಆರೋಗ್ಯ ತಪಾಸಣೆ, ವಿಚಾರ ಸಂಕಿರಣ ಏರ್ಪಡಿಸಲುವ ಬಗ್ಗೆ ಚರ್ಚಿಸ ಲಾಯಿತು.ಸಂಪೂರ್ಣ ಸ್ವಚ್ಛತಾ ಆಂದೋಲನ, ಮಧ್ಯಾಹ್ನ ಬಿಸಿ ಊಟ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ, ರಾಷ್ಟ್ರೀಯ ಕೃಷಿ, ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಕಾರ್ಯಕ್ರಮ ಗಳು, ಪ್ರಧಾನ ಮಂತ್ರಿಗಳ 15 ಅಂಶಗಳ ಕಾರ್ಯಕ್ರಮ, ಜಲಾನಯನ ಅಭಿವೃದ್ಧಿ, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ, ಸಮುದಾಯ ಆಧಾರಿತ ಕುಡಿಯುವ ನೀರಿನ ಯೋಜನೆಗಳು, ನೆಹರು ಯುವ ಕೇಂದ್ರ ಮುಂತಾದ ಯೋಜನೆಗಳ ಕುರಿತಂತೆ, ಶಿಬಿರ ಕಾರ್ಯಾಗಾರ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಸಂಬಂಧಿಸಿದ ಇಲಾಖೆಗಳ ಮುಖ್ಯಸ್ಥರ ನೇತೃತ್ವದಲ್ಲಿ ರೂಪಿಸುವ ಬಗ್ಗೆ ತೀರ್ಮಾನಿಸಲಾಯಿತು.ಕಾರ್ಯಕ್ರಮ ಯಶಸ್ವಿಗೊಳಿಸಲು ಜಮಖಂಡಿಯ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿಯನ್ನು ರಚಿಸಲಾಗಿದ್ದು, ಮುಧೋಳ ತಾಲ್ಲೂಕಿನ ತಹಶೀಲ್ದಾರ್, ಕಾರ್ಯ ನಿರ್ವಾಹಕ ಅಧಿಕಾರಿ, ತಾಲ್ಲೂಕ ಮಟ್ಟದ ಅಧಿಕಾರಿ ಗಳು, ಕೈಮಗ್ಗ ಮತ್ತು ಜವಳಿ ಇಲಾಖೆಯ ಉಪ ನಿರ್ದೇಶಕರ ದೊಡ್ಡ ಬಸವರಾಜ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರ ಶ್ರಿಶೈಲ ಕಂಕಣವಾಡಿ ಅವರು ಸಮಿತಿಯ ಸದಸ್ಯರಾಗಿದ್ದಾರೆ.ಸಭೆಯಲ್ಲಿ ಪಿ.ಐ.ಬಿ.ಯ ಜಂಟಿ ನಿರ್ದೇಶಕ ಜಿ.ಕೆ.ಪೈ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ, ಉಪ ಕಾರ್ಯದರ್ಶಿ ವಿ.ಎಸ್.ಹಿರೇಮಠ, ಅಪರ ಜಿಲ್ಲಾಧಿಕಾರಿ ಸಿರಸಗಿ ನಾಗಪ್ಪ, ಡಿ.ಡಿ.ಪಿ.ಐ ಮನಹಳ್ಳಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕರ ಶ್ರೀಶೈಲ ಕಂಕಣವಾಡಿ, ಪಂಚಾಯತ್ ರಾಜ್ಯ ಎಂಜಿನಿಯರ್ ಮನೋಹರ ಮಂದೋಳಿ, ಜಿಲ್ಲಾ ಸಮಾಜ ಕಲ್ಯಾಧಿಕಾರಿ ವಿ.ಜಿ.ಜೋಶಿ, ಹಿಂದುಳಿದ ವರ್ಗಗಳ ಅಧಿಕಾರಿ ಎ.ಬಿ.ಗೊರವರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಗುಂಡಪ್ಪ, ಡಾ.ದೇಸಾಯಿ, ವಾರ್ತಾಧಿಕಾರಿ ಎಂ.ಪಿ. ಶ್ರಿರಂಗನಾಥ, ಯುವಜನ ಸೇವಾ ಅಧಿಕಾರಿ ಬಿ.ಕೆ. ನಂದನೂರ ಮತ್ತಿತರರು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry