ಭಾರತ–ಪಾಕ್‌ ಮಧ್ಯೆ ಅಣು ಸ್ಥಾವರ ಮಾಹಿತಿ ವಿನಿಮಯ

7

ಭಾರತ–ಪಾಕ್‌ ಮಧ್ಯೆ ಅಣು ಸ್ಥಾವರ ಮಾಹಿತಿ ವಿನಿಮಯ

Published:
Updated:

ನವದೆಹಲಿ (ಐಎಎನ್‌ಎಸ್‌): ಭಾರತ ಮತ್ತು ಪಾಕಿಸ್ತಾನ ತಮ್ಮ ಅಣು ಸ್ಥಾವರಗಳು ಮತ್ತು ಕೇಂದ್ರಗಳ ಪಟ್ಟಿಯನ್ನು ಮಂಗಳವಾರ ಪರಸ್ಪರ ವಿನಿಮಯ ಮಾಡಿಕೊಂಡವು. ಜತೆಗೆ ನೆರೆಯ ದೇಶದ ಜೈಲುಗಳಲ್ಲಿರುವ ತಮ್ಮ ದೇಶದ ಪ್ರಜೆಗಳ ಹೆಸರಿರುವ ಪಟ್ಟಿಯನ್ನೂ ವಿನಿಮಯ ಮಾಡಿಕೊಳ್ಳಲಾಯಿತು.ಪ್ರತಿ ವರ್ಷ ಜನವರಿ 1ರಂದು ಏಕಕಾಲದಲ್ಲಿ ಅಣು ಸ್ಥಾವರಗಳು ಮತ್ತು ಕೇಂದ್ರಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ. ಅಣು ಸ್ಥಾವರ ಮತ್ತು ಕೇಂದ್ರಗಳ ಮೇಲೆ ದಾಳಿ ನಿಷೇಧ ಒಪ್ಪಂದದ ಭಾಗವಾಗಿ ಈ ವಿನಿಮಯ ನಡೆಯುತ್ತದೆ.1988ರ ಡಿಸೆಂಬರ್‌ 31ರಂದು ಸಹಿ ಮಾಡಲಾದ ಈ ಒಪ್ಪಂದ 1991ರ ಜನವರಿ 27ರಂದು ಅನುಷ್ಠಾನಕ್ಕೆ ಬಂತು. ಹೀಗಾಗಿ ಇದು ಸತತ 23ನೇ ಮಾಹಿತಿ ವಿನಿಮಯವಾಗಿದೆ. 1992ರ ಜನವರಿ 1ರಂದು ಮೊದಲ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಲಾಗಿತ್ತು.ಭಾರತ ಮತ್ತು ಪಾಕಿಸ್ತಾನ ನಡುವೆ ರಾಜತಾಂತ್ರಿಕ ಮಾಹಿತಿ ಒಪ್ಪಂದದ ಅನ್ವಯ ಪಕ್ಕದ ದೇಶದ ಜೈಲುಗಳಲ್ಲಿರುವ ತನ್ನ ದೇಶದ ಪ್ರಜೆಗಳ ಪಟ್ಟಿಯನ್ನೂ ವಿನಿಮಯ ಮಾಡಿಕೊಳ್ಳಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry