ಶುಕ್ರವಾರ, ಜೂನ್ 25, 2021
29 °C

ಭಾರತ-ಆಫ್ಘನ್‌ ಪೈಪೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೀರ್‌ಪುರ, ಬಾಂಗ್ಲಾದೇಶ (ಪಿಟಿಐ): ಫೈನಲ್ ಪ್ರವೇಶದ ಅವಕಾಶ ಕಳೆದುಕೊಂಡಿರುವ ಭಾರತ ತಂಡ ಏಷ್ಯಾಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಬುಧವಾರ ಆಫ್ಘಾನಿಸ್ತಾನ ವಿರುದ್ಧ ಪೈಪೋಟಿ ನಡೆಸಲಿದೆ.ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಈಗಾಗಲೇ ಟೂರ್ನಿಯ ಫೈನಲ್‌ ಪ್ರವೇಶಿಸಿವೆ. ಆದ್ದರಿಂದ ಇಂದಿನ ಪಂದ್ಯಕ್ಕೆ ಯಾವುದೇ ಮಹತ್ವ ವಿಲ್ಲ. ಆದರೂ ಗೆಲುವು ಪಡೆದು ಅಲ್ಪ ಸಮಾಧಾನ ಪಟ್ಟುಕೊಳ್ಳುವುದು ವಿರಾಟ್‌ ಕೊಹ್ಲಿ ಬಳಗದ ಗುರಿ.ಭಾನುವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಸೋಲು ಅನುಭವಿಸಿದಾಗಲೇ ಭಾರತದ ಫೈನಲ್‌ ಪ್ರವೇಶದ ಸಾಧ್ಯತೆ ಕಡಿಮೆ ಯಾಗಿತ್ತು. ಇತರ ಪಂದ್ಯಗಳ ಫಲಿತಾಂಶವನ್ನು ಆಧರಿಸಿ ಭಾರತಕ್ಕೆ ಫೈನಲ್‌ ಪ್ರವೇಶಿಸುವ ಅಲ್ಪ ಅವಕಾಶ ವಿತ್ತು. ಆದರೆ ಮಂಗಳವಾರ ನಡೆದ ಪಂದ್ಯದಲ್ಲಿ   ಪಾಕಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ ಗೆಲುವು ಪಡೆದ ಕಾರಣ ಕೊಹ್ಲಿ ಬಳಗದ ಫೈನಲ್‌ ಸಾಧ್ಯತೆ ಅಸ್ತಮಿಸಿತು.ದೋನಿ ಬದಲು ತಂಡವನ್ನು ಮುನ್ನಡೆಸುತ್ತಿರುವ  ಕೊಹ್ಲಿಗೆ ನಿರೀಕ್ಷಿತ ಯಶಸ್ಸು ಲಭಿಸಿಲ್ಲ. ಅಂತಿಮ ಪಂದ್ಯದಲ್ಲಿ ಗೆದ್ದು ನಿರಾಸೆಯನ್ನು ಮರೆಸುವುದು ಅವರ ಲೆಕ್ಕಚಾರ.ಮೊದಲ ಪಂದ್ಯದಲ್ಲಿ ಆಕರ್ಷಕ 136 ರನ್‌ ಗಳಿಸಿದ್ದ ಕೊಹ್ಲಿ ಬಳಿಕದ ಪಂದ್ಯಗಳಲ್ಲಿ ವಿಫಲರಾಗಿದ್ದರು. ರೋಹಿತ್‌ ಶರ್ಮ, ಶಿಖರ್‌ ಧವನ್‌, ಅಜಿಂಕ್ಯ ರಹಾನೆ ಮತ್ತು ಅಂಬಟಿ ರಾಯಡು ಅರ್ಧಶತಕ ಗಳಿಸಿದ್ದಾರೆ. ಆದರೆ ಯಾರಿಗೂ ದೊಡ್ಡ ಪೇರಿಸಲು ಸಾಧ್ಯವಾಗಿಲ್ಲ.ಆರಂಭ: ಮಧ್ಯಾಹ್ನ 1.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.