ಭಾರತ- ಆಸೀಸ್ ಪಂದ್ಯ ಸ್ಥಳಾಂತರ?

7

ಭಾರತ- ಆಸೀಸ್ ಪಂದ್ಯ ಸ್ಥಳಾಂತರ?

Published:
Updated:

ನವದೆಹಲಿ/ ಕಾನ್ಪುರ (ಪಿಟಿಐ): ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಮುಂದಿನ ಮಾರ್ಚ್‌ನಲ್ಲಿ ನಡೆಯುವ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯ ಕಾನ್ಪುರದ ಗ್ರೀನ್‌ಪಾರ್ಕ್ ಕ್ರೀಡಾಂಗಣದ ಕೈತಪ್ಪುವ ಸಾಧ್ಯತೆಯಿದೆ.ಈ ಪಂದ್ಯವನ್ನು ಗ್ರೀನ್‌ಪಾರ್ಕ್ ಬದಲು ಹೈದರಾಬಾದ್‌ಗೆ ಸ್ಥಳಾಂತರಿಸುವ ಚಿಂತನೆ ನಡೆದಿದೆ. ನಿಗದಿತ ವೇಳಾಪಟ್ಟಿಯಂತೆ ಮೂರನೇ ಟೆಸ್ಟ್ ಮಾರ್ಚ್ 14 ರಿಂದ ಕಾನ್ಪುರದಲ್ಲಿ ನಡೆಯಬೇಕು. ಆದರೆ ಇತ್ತೀಚೆಗೆ ಗ್ರೀನ್‌ಪಾರ್ಕ್ ಕ್ರೀಡಾಂಗಣದ ಪರಿಶೀಲನೆ ನಡೆಸಿದ ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಪ್ರತಿನಿಧಿಗಳು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದಾರೆ.

ಕ್ರೀಡಾಂಗಣದಲ್ಲಿ ನವೀಕರಣ ಕಾಮಗಾರಿ ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ. ಸಿಎ ಪ್ರತಿನಿಧಿಗಳು ಅಂಗಳದ ಔಟ್‌ಫೀಲ್ಡ್ ಮತ್ತು ಆಟಗಾರರ ಡ್ರೆಸಿಂಗ್ ಕೊಠಡಿಯಲ್ಲಿನ ಸೌಲಭ್ಯಗಳ ಬಗ್ಗೆ ತೃಪ್ತರಾಗಿಲ್ಲ ಎನ್ನಲಾಗಿದೆ. ಐಪಿಎಲ್ ಮುಖ್ಯಸ್ಥ ರಾಜೀವ್ ಶುಕ್ಲಾ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರು ಪಂದ್ಯವನ್ನು ಸ್ಥಳಾಂತರಿಸುವ ಕುರಿತು ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮೂಲವೊಂದು ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry