ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ 12ರಿಂದ ಆರಂಭ

7

ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ಸರಣಿ 12ರಿಂದ ಆರಂಭ

Published:
Updated:

ನವದೆಹಲಿ (ಪಿಟಿಐ): ಭಾರತ ಪ್ರವಾಸ ಕೈಗೊಳ್ಳಲಿರುವ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದವರು ಆತಿಥೇಯರ ಎದುರು ಮಾರ್ಚ್ 12ರಿಂದ ಮೂರು ಏಕದಿನ ಹಾಗೂ ಐದು ಟ್ವೆಂಟಿ-20 ಪಂದ್ಯಗಳ ಸರಣಿಯನ್ನಾಡಲಿದ್ದಾರೆ.ಮಾರ್ಚ್ 10ರಂದು ಆಸೀಸ್ ಅಹಮದಾಬಾದ್‌ನಲ್ಲಿ ಏಕೈಕ ಅಭ್ಯಾಸ ಪಂದ್ಯ ಆಡಲಿದೆ. 21ರಂದು ಇಲ್ಲಿಯೇ ಮೊದಲ ಏಕದಿನ ಪಂದ್ಯ ನಡೆಯಲಿದೆ.ಎರಡನೇ ಹಾಗೂ ಮೂರನೇ ಏಕದಿನ ಪಂದ್ಯಗಳು ಕ್ರಮವಾಗಿ 14 ಹಾಗೂ 16ರಂದು ಮುಂಬೈಯಲ್ಲಿ ಆಯೋಜನೆಯಾಗಿವೆ.ಮಾರ್ಚ್ 18ರಿಂದ 23ರ ವರೆಗೆ ವಿಶಾಖಪಟ್ಟಣದಲ್ಲಿ ಐದು ಟ್ವೆಂಟಿ-20 ಪಂದ್ಯಗಳು ಜರುಗಲಿವೆ. 25ರಂದು ಆಸೀಸ್ ತಂಡ ತವರು ನಾಡಿಗೆ ಪ್ರಯಾಣ ಬೆಳಸಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ    ಮಂಡಳಿ (ಬಿಸಿಸಿಐ) ಪ್ರಕಟಣೆಯಲ್ಲಿ ತಿಳಿಸಿದೆ.ವೇಳಾಪಟ್ಟಿ: ಮಾಚ್ 12ರಂದು ಏಕದಿನ ಕ್ರಿಕೆಟ್ ಸರಣಿ ಆರಂಭ (ಮೂರು ಪಂದ್ಯಗಳ ಸರಣಿ). 28ರಂದು ಟ್ವೆಂಟಿ-20 ಸರಣಿ ಆರಂಭ (ಐದು ಪಂದ್ಯಗಳ ಸರಣಿ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry