ಭಾರತ- ಇಂಡೋನೇಷ್ಯಾ:11 ಒಪ್ಪಂದಕ್ಕೆ ಸಹಿ

7

ಭಾರತ- ಇಂಡೋನೇಷ್ಯಾ:11 ಒಪ್ಪಂದಕ್ಕೆ ಸಹಿ

Published:
Updated:

ಹೊಸದಿಲ್ಲಿ(ಐಎಎನ್‌ಎಸ್): ಉಭಯ ರಾಷ್ಟ್ರಗಳ ನಡುವೆ ಭಯೋತ್ಪಾದನಾ ತಡೆ ಕುರಿತ  ಸಹಕಾರವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪರಸ್ಪರ ಕಾನೂನಿನ ಸಹಕಾರ ಒಪ್ಪಂದ ಮತ್ತು ಹಸ್ತಾಂತರ ಒಪ್ಪಂದ ಸೇರಿದಂತೆ ಭಾರತ ಮತ್ತು ಇಂಡೋನೇಷ್ಯಾ ಮಂಗಳವಾರ 11 ಒಪ್ಪಂದಗಳಿಗೆ ಸಹಿ ಹಾಕಿದೆ.ಮೂರು ದಿನಗಳ ಭೇಟಿಗಾಗಿ ಸೋಮವಾರ ಇಲ್ಲಿಗೆ ಆಗಮಿಸಿದ ಇಂಡೋನೇಷ್ಯಾ ಅಧ್ಯಕ್ಷ ಸುಸಿಲೊ ಬಾಂಬಾಂಗ್ ಯುಧೊಯೊನೊ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಅವರ ನಡುವೆ ನಡೆದ ಮಾತುಕತೆಯ ಬಳಿಕ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.ಇದರಲ್ಲಿ ವಿಮಾನ ಸೇವೆ ಮತ್ತು ಪೆಟ್ರೋಲಿಯಂ ಮತ್ತು ಅನಿಲ ಕ್ಷೇತ್ರಕ್ಕೆ ಸಂಬಂಧಿಸಿದ ಒಪ್ಪಂದಗಳೇ ಹೆಚ್ಚು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry