ಮಂಗಳವಾರ, ಮೇ 18, 2021
28 °C
ಆಮದು, ರಫ್ತಿಗೆ ಉತ್ತೇಜನ

ಭಾರತ-ಇರಾಕ್ ನಡುವೆ ಒಪ್ಪಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗ್ದಾದ್ (ಪಿಟಿಐ): ಭಾರತ ಮತ್ತು ಇರಾಕ್ ಆಮದು ಮತ್ತು ರಫ್ತು ಮಾರಾಟದ ಉತ್ತೇಜನ ಮತ್ತು ಸಹಕಾರದ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರನ್ವಯ ಅರಬ್ ರಾಷ್ಟ್ರಗಳಿಂದ ಭಾರತಕ್ಕೆ ಮತ್ತಷ್ಟು ತೈಲ ಉತ್ಪನ್ನವು ಹರಿದು ಬರಲಿದೆ.ಭಾರತದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಹಾಗೂ ಇರಾಕ್ ವಿದೇಶಾಂಗ  ಸಚಿವ ಹೊಷ್ಯಯಾರ್ ಝೀಬ್ರಿ ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಒಪ್ಪಂದದ ವಿವರ ನೀಡಿದ್ದಾರೆ.ಇರಾಕ್ ಭದ್ರತಾ ವ್ಯವಸ್ಥೆ ಕುರಿತು ಭಾರತಕ್ಕೆ ಮನವರಿಕೆ ಮಾಡಿಕೊಡಲಾಗಿದ್ದು, ದೇಶದ ವಿವಿಧ ಪ್ರದೇಶಗಳಲ್ಲಿ ಭಾರತ ಕಂಪೆನಿಗಳು ಬಂಡವಾಳ ಹೂಡಬಹುದು ಎಂದು  ಇರಾಕ್ ವಿದೇಶಾಂಗ ಸಚಿವ ಹೊಷ್ಯಯಾರ್ ಝೀಬ್ರಿ ಹೇಳಿದ್ದಾರೆ.ಸಲ್ಮಾನ್ ಖುರ್ಷಿದ್ ಮಾತನಾಡಿ, ಎರಡೂ ರಾಷ್ಟ್ರಗಳ ನಡುವೆ ಎಲ್ಲ ವಲಯದಲ್ಲೂ ಬಾಂಧವ್ಯ ಹೊಂದುವ ಅಗತ್ಯವಿದ್ದು, ಈ ಒಪ್ಪಂದವು ಕೇವಲ ಮಾರಾಟ ಕ್ಷೇತ್ರಕ್ಕೆ ಸಂಬಂಧಿಸಿದ ಬಾಂಧವ್ಯವಾಗಿಲ್ಲ ಎಂದು ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.