ಶನಿವಾರ, ನವೆಂಬರ್ 23, 2019
18 °C

ಭಾರತ ಎಂದರೆ ಕೇವಲ ಚೆನ್ನೈ ಅಲ್ಲ: ಸಂಗಕ್ಕಾರ

Published:
Updated:

ಹೈದರಾಬಾದ್ (ಪಿಟಿಐ): ಐಪಿಎಲ್ ಟೂರ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗರಿಗೆ ಚೆನ್ನೈನಲ್ಲಿ ಆಡಲು ಅವಕಾಶ ನಿರಾಕರಿಸಿರುವುದರಿಂದ ನಮ್ಮಲಿರುವ ಕ್ರೀಡೋತ್ಸಾಹ ಕಡಿಮೆಯಾಗಿಲ್ಲ ಎಂದು ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಕುಮಾರ ಸಂಗಕ್ಕಾರ ಹೇಳಿದರು.ಸೋಮವಾರ ಮಾತನಾಡಿದ ಅವರು, `ಭಾರತದ ಎಲ್ಲೆಡೆ ಆಡುವುದು ಶ್ರೀಲಂಕಾ ಕ್ರಿಕೆಟಿಗರ ಬಯಕೆ. ಆದರೆ, ರಾಜಕೀಯ ನಮ್ಮನ್ನು ಕೆಲವು ಕಡೆಗಳಲ್ಲಿ ಭಾಗವಹಿಸದಂತೆ ತಡೆದಿದೆ. ಈ ರೀತಿಯ    ಪೂರ್ವಗ್ರಹಗಳಿಂದಾಗಿ ಲಂಕಾ ಆಟಗಾರರ ಕ್ರೀಡೋತ್ಸಾಹ ಕಡಿಮೆಯಾಗುತ್ತದೆ ಎಂದು ನಾನು ಭಾವಿಸಿಲ್ಲ' ಎಂದು ಹೇಳಿದರು.`ಭಾರತ ಎಂದರೆ ಚೆನ್ನೈ ಮತ್ತು ತಮಿಳುನಾಡು ಮಾತ್ರ ಎಂದರ್ಥವಲ್ಲ. ದೇಶದ ಬೇರೆ ಪ್ರದೇಶಗಳಲ್ಲಿ ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಒಂದು ವೇಳೆ ಇದು ದೇಶ-ದೇಶಗಳ ನಡುವಿನ ವಿವಾದವಾಗಿದ್ದರೆ ಶ್ರೀಲಂಕಾ ಆಟಗಾರರು ಬರುತ್ತಲೇ ಇರಲಿಲ್ಲ' ಎಂದರು.

ಪ್ರತಿಕ್ರಿಯಿಸಿ (+)