ಭಾರತ ಎ ಉತ್ತಮ ಮೊತ್ತ

7

ಭಾರತ ಎ ಉತ್ತಮ ಮೊತ್ತ

Published:
Updated:

ಲಿಂಕನ್, ನ್ಯೂಜಿಲೆಂಡ್ (ಪಿಟಿಐ): ಅಶೋಕ್ ಮೆನೇರಿಯಾ ಮತ್ತು ಮನ್‌ದೀಪ್ ಸಿಂಗ್ ಗಳಿಸಿದ ಅಜೇಯ ಶತಕದ ನೆರವಿನಿಂದ ಭಾರತ `ಎ~ ತಂಡ ನ್ಯೂಜಿಲೆಂಡ್ `ಎ~ ವಿರುದ್ಧದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಮೊತ್ತ ಪೇರಿಸಿದೆ.ಮೊದಲ ದಿನವಾದ ಬುಧವಾರದ ಆಟದ ಅಂತ್ಯಕ್ಕೆ ಭಾರತ ತನ್ನ ಮೊದಲ ಇನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್‌ಗೆ 433 ರನ್ ಗಳಿಸಿತ್ತು. ಮನ್‌ದೀಪ್ (ಅಜೇಯ 169) ಮತ್ತು ಮೆನೇರಿಯಾ (ಅಜೇಯ 164) ಅವರ ಭರ್ಜರಿ ಬ್ಯಾಟಿಂಗ್ ಪ್ರವಾಸಿ ತಂಡದ ಭಾರಿ ಮೊತ್ತಕ್ಕೆ ಕಾರಣ. ಇವರಿಬ್ಬರು ಐದನೇ ವಿಕೆಟ್‌ಗೆ ಈಗಾಗಲೇ 294 ರನ್ ಪೇರಿಸಿದ್ದಾರೆ.ಸಂಕ್ಷಿಪ್ತ ಸ್ಕೋರ್: ಭಾರತ `ಎ~: 88.2 ಓವರ್‌ಗಳಲ್ಲಿ 433 (ಮನ್‌ದೀಪ್ ಬ್ಯಾಟಿಂಗ್ 169, ಅಶೋಕ್ ಮೆನೇರಿಯಾ ಬ್ಯಾಟಿಂಗ್ 164, ಅನುಸ್ತಪ್ ಮಜುಂದಾರ್ 56, ಬ್ರೆಂಟ್ ಅರ್ನೆಲ್ 70ಕ್ಕೆ 3)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry