ಶನಿವಾರ, ಮೇ 8, 2021
27 °C

ಭಾರತ- ಕಿವೀಸ್ ಪಂದ್ಯ ಡ್ರಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಟರ್‌ಡಮ್ (ಪಿಟಿಐ): ಭಾರತ ತಂಡ ಎಫ್‌ಐಎಚ್ ವಿಶ್ವ ಹಾಕಿ ಲೀಗ್ ರೌಂಡ್-3 ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ ಜೊತೆ 3-3 ಗೋಲುಗಳ ಡ್ರಾ ಸಾಧಿಸಿತು.ಪಂದ್ಯದ ಹೆಚ್ಚಿನ ಅವಧಿಯಲ್ಲಿ ಪ್ರಭುತ್ವ ಸಾಧಿಸಿದ್ದ ಭಾರತ ಗೆಲುವು ಪಡೆಯುವ ಅವಕಾಶವನ್ನು ಕಳೆದುಕೊಂಡಿತು. ರಕ್ಷಣಾ ವಿಭಾಗದ ವೈಫಲ್ಯದಿಂದಾಗಿ ತಂಡ ಡ್ರಾಕ್ಕೆ ತೃಪ್ತಿಪಟ್ಟುಕೊಂಡಿತು. ಮನ್‌ದೀಪ್ ಸಿಂಗ್ (46ನೇ ನಿಮಿಷ), ವಿ.ಆರ್. ರಘುನಾಥ್ (47) ಮತ್ತು ಕೊತಜಿತ್ ಸಿಂಗ್ (53) ಭಾರತದ ಪರ ಗೋಲು ಗಳಿಸಿದರು. ನ್ಯೂಜಿಲೆಂಡ್ ಪರ ಮಾರ್ಕಸ್ ಚೈಲ್ಡ್ (6), ಸ್ಟೀಫನ್ ಜೆನೆಸ್ (51) ಹಾಗೂ ಬ್ಲೇರ್ ಹಿಲ್ಟನ್ (66) ಚೆಂಡನ್ನು ಗುರಿ ಸೇರಿಸಿದರು.ಈ ಮೂಲಕ ಭಾರತ ಒಟ್ಟು ಎರಡು ಪಾಯಿಂಟ್‌ಗಳೊಂದಿಗೆ `ಬಿ' ಗುಂಪಿನಲ್ಲಿ ತನ್ನ ಲೀಗ್ ವ್ಯವಹಾರ ಕೊನೆಗೊಳಿಸಿತು. ಹಾಲೆಂಡ್ ಕೈಯಲ್ಲಿ ಸೋಲು ಅನುಭವಿಸಿದ್ದ ಭಾರತ, ಐರ್ಲೆಂಡ್ ವಿರುದ್ಧ 4-4 ಗೋಲುಗಳ ಡ್ರಾ ಸಾಧಿಸಿತ್ತು. ಟೂರ್ನಿಯ ನಾಕೌಟ್ ಹಂತದ ಪಂದ್ಯಗಳು ಬುಧವಾರದಿಂದ ಆರಂಭವಾಗಲಿವೆ. ಭಾರತ ನಾಕೌಟ್ ಪಂದ್ಯದಲ್ಲಿ `ಎ' ಗುಂಪಿನ ಅಗ್ರಸ್ಥಾನಿ ಬೆಲ್ಜಿಯಂ ಅಥವಾ ಎರಡನೇ ಸ್ಥಾನ ಪಡೆಯುವ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.