ಭಾರತ, ಚೀನಾ, ಬ್ರೆಜಿಲ್‌ನ ಬೇಡಿಕೆ ತೈಲ ಬೆಲೆ ಏರಿಕೆಗೆ ಕಾರಣ: ಒಬಾಮ

7

ಭಾರತ, ಚೀನಾ, ಬ್ರೆಜಿಲ್‌ನ ಬೇಡಿಕೆ ತೈಲ ಬೆಲೆ ಏರಿಕೆಗೆ ಕಾರಣ: ಒಬಾಮ

Published:
Updated:

ವಾಷಿಂಗ್ಟನ್ (ಪಿಟಿಐ): ಭಾರತ, ಚೀನಾ ಹಾಗೂ ಬ್ರೆಜಿಲ್‌ನಂತಹ ದೇಶಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮುಂಬರುವ ವರ್ಷಗಳಲ್ಲಿ ತೈಲ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.ಫ್ಲೋರಿಡಾದಲ್ಲಿ ಮಾಡಿದ ಭಾಷಣದಲ್ಲಿ ಈ ಅಂಶ ಪ್ರಸ್ತಾಪಿಸಿರುವ ಅವರು, ಮಧ್ಯ ಏಷ್ಯಾದ ಅಸ್ಥಿರತೆ ಪ್ರಸಕ್ತ ತೈಲ ಬೆಲೆ ಏರುಪೇರಿಗೆ ಕಾರಣವಾಗಿದೆ. ಆದರೆ ಮುಂದಿನ ಕೆಲ ವರ್ಷಗಳಲ್ಲಿ ಭಾರತ, ಬ್ರೆಜಿಲ್, ಚೀನಾಗಳಿಂದ ಬರುವ ಅತಿ ಬೇಡಿಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಗೆ ದಾರಿ ಮಾಡಿಕೊಡಲಿದೆ ಎಂದಿದ್ದಾರೆ.ಇನ್ನೈದು ವರ್ಷಗಳಲ್ಲಿ ಚೀನಾದಲ್ಲಿ ಓಡುವ ಕಾರುಗಳ ಸಂಖ್ಯೆ ತ್ರಿಗುಣಗೊಳ್ಳಲಿದೆ. ಅದಕ್ಕೆ ಎಷ್ಟು ಪೆಟ್ರೋಲ್ ಬೇಕಾಗುತ್ತದೆ ಎಂದು ಒಬಾಮ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry