ಭಾರತ ಜಗತ್ತಿನ ಅತ್ಯುತ್ತಮ ಹೊರಗುತ್ತಿಗೆ ತಾಣ

7

ಭಾರತ ಜಗತ್ತಿನ ಅತ್ಯುತ್ತಮ ಹೊರಗುತ್ತಿಗೆ ತಾಣ

Published:
Updated:

ಬಾಸ್ಟನ್ (ಪಿಟಿಐ):  ವಹಿಸಿದ ಕೆಲಸವನ್ನು ಅತ್ಯಂತ ತ್ವರಿತವಾಗಿ ಮಾಡಿಕೊಡುವ ಹಾಗೂ ಭಾರಿ ಕೌಶಲ್ಯದ ತಳಹದಿ ಹೊಂದಿರುವ ಕಾರಣಕ್ಕಾಗಿ ಭಾರತವು ಜಗತ್ತಿನ ಅತ್ಯುತ್ತಮ ಹೊರಗುತ್ತಿಗೆ ತಾಣವಾಗಿದೆ.ಜಾಗತಿಕ ನಿರ್ವಹಣಾ ಸಲಹಾ ಸಂಸ್ಥೆ ಎ.ಟಿ.ಕೀರ್ನೆ ನೀಡಿದ ರ್ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನದಲ್ಲಿದ್ದರೆ, ಚೀನಾ ಎರಡನೇ ಸ್ಥಾನದಲ್ಲಿ ಮತ್ತು  ಮಲೇಷ್ಯಾ ಮೂರನೇ ಸ್ಥಾನದಲ್ಲಿವೆ. ಸಂಸ್ಥೆ ನಡೆಸಿದ 2011ನೇ ಸಾಲಿನ ಜಾಗತಿಕ ಸೇವಾ ನಿವೇಶನ ಸೂಚಿಯ (ಜಿಎಸ್‌ಎಲ್‌ಐ) ಆಧಾರದಲ್ಲಿ ಈ ರ್ಯಾಂಕಿಂಗ್ ನೀಡಲಾಗಿದೆ. 2003ರಿಂದೀಚೆಗೆ  ಸಮೀಕ್ಷೆ ನಡೆಸಲಾಗುತ್ತಿದೆ.‘ಪ್ರತಿಭೆ, ಕಡಿಮೆ ವೆಚ್ಚ, ಎಲ್ಲಾ ರೀತಿಯ ಕೆಲಸಕ್ಕೂ ಸಿಗುವಂತಹ ಮಾನವ ಶಕ್ತಿ, ತ್ವರಿತವಾಗಿ ಕೆಲಸ ಮಾಡಿಕೊಡುವುದು, ಕೌಶಲ್ಯ ಸಹಿತ ಹತ್ತಾರು ಕಾರಣಗಳಿಂದಾಗಿ ಭಾರತ ಐಟಿ ವಲಯ ಸೇವಾ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ನಿಂತಿದೆ’ ಎಂದು ಸಂಸ್ಥೆಯ ವರದಿಯಲ್ಲಿ ತಿಳಿಸಲಾಗಿದೆ. ವಿದೇಶದಿಂದ ಬರುವಂತಹ ಕೆಲಸದ ಎಲ್ಲಾ ಆಯಾಮಗಳಿಗೂ ಭಾರತದಲ್ಲಿ ಉತ್ತರವಿದೆ.

 

ಐಟಿ ಕ್ಷೇತ್ರದಲ್ಲಂತೂ ದೇಶದ ಸಾಧನೆ ಅತ್ಯುತ್ತಮ. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳೂ ಅಲ್ಲಿವೆ.ಇಂಗ್ಲಿಷ್ ಜ್ಞಾನ ಕೂಡ ಚೆನ್ನಾಗಿದೆ. ಇನ್ಫೋಸಿಸ್, ವಿಪ್ರೊದಂತಹ ಕಂಪೆನಿಗಳು ತಮ್ಮದೇ ಸಂಶೋಧನೆ ಮತ್ತು ಅಭಿವೃದ್ಧಿ (ಆರ್ ಆ್ಯಂಡ್ ಡಿ) ಘಟಕಗಳನ್ನು ಸ್ಥಾಪಿಸಿ ಇನ್ನಷ್ಟು ಹೆಚ್ಚಿನ ಸೇವೆಗೆ ತಮ್ಮನ್ನು ಸಜ್ಜು ಮಾಡಿಕೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.ಹೊರಗುತ್ತಿಗೆಯ ಮೊದಲ 10 ದೇಶಗಳಲ್ಲಿ ಏಷ್ಯಾದ ದೇಶಗಳೇ ಮೆರೆದಿರುವುದು ಮತ್ತೊಂದು ವಿಶೇಷ. ಇಂಡೋನೇಷ್ಯಾಕ್ಕೆ 5ನೇ ರ್ಯಾಂಕ್, ಥಾಯ್ಲೆಂಡ್‌ಗೆ 7ನೇ ರ್ಯಾಂಕ್, ವಿಯೆಟ್ನಾಂಗೆ 8ನೇ ರ್ಯಾಂಕ್ ಮತ್ತು ಫಿಲಿಪ್ಪೀನ್ಸ್‌ಗೆ 9ನೇ ರ್ಯಾಂಕ್ ಲಭಿಸಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry