ಗುರುವಾರ , ಮೇ 19, 2022
21 °C

ಭಾರತ-ಜಪಾನ್ ಮಾತುಕತೆ: ಪರಮಾಣು ಸಹಕಾರಕ್ಕೆ ಆದ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಪಿಟಿಐ): ಉಭಯ ದೇಶಗಳ ನಡುವಿನ 5ನೇ ತಂತ್ರಗಾರಿಕೆಯ ಮಾತುಕತೆಯಲ್ಲಿ ನಾಗರಿಕ ಪರಮಾಣು ಸಹಕಾರಕ್ಕೆ ಸಂಬಂಧಿಸಿದಂತೆ ಚರ್ಚಿಸುವುದಾಗಿ ಜಪಾನ್ ಶನಿವಾರ ಭಾರತಕ್ಕೆ ಭರವಸೆ ನೀಡಿದೆ.ತನ್ನ ದೇಶದಲ್ಲಿ ಸಂಭವಿಸಿದ ಅಣು ದುರಂತದ ಮಧ್ಯೆಯೂ ಜಪಾನ್ ಈ ಭರವಸೆ ನೀಡಿರುವುದು ಮಹತ್ವದ್ದಾಗಿದೆ. ಭಾರತದ ಏಳು ಪರಮಾಣು ಸಾಮಗ್ರಿಗಳ ಮೇಲೆ ವಿಧಿಸಿದ್ದ ನಿಷೇಧವನ್ನು ತೆಗೆದು ಹಾಕುವ ಜಪಾನ್ ನಿರ್ಧಾರಕ್ಕೆ  ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.ಜಪಾನ್ ತೆಗೆದುಕೊಂಡ ಈ ನಿರ್ಧಾರವು ಉನ್ನತ ತಂತ್ರಜ್ಞಾನಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ವ್ಯಾಪಾರಕ್ಕೆ ಸುಗಮ ಹಾದಿ ಮಾಡಿಕೊಡಲಿದೆ. `ಪರಸ್ಪರ ನಾಗರಿಕ ಪರಮಾಣು ಸಹಕಾರಕ್ಕೆ ಸಂಬಂಧಿಸಿದಂತೆ ನಾನು ಜಪಾನ್ ವಿದೇಶಾಂಗ ಸಚಿವ ಕೊಯ್ಚಿರೊ ಜೆಂಬಾ ಅವರ ಜೊತೆ ಚರ್ಚಿಸಿದ್ದೇನೆ.ಈಗಾಗಲೇ ಈ ಸಂಬಂಧ 3 ಸುತ್ತಿನ ಮಾತುಕತೆ ನಡೆಸಿದ್ದೇವೆ. ಉಭಯ ದೇಶಗಳ ನಡುವಿನ ಸಹಭಾಗಿತ್ವವನ್ನು ಉನ್ನತ ಮಟ್ಟಕ್ಕೆ ಏರಿಸುವುದು ನಮ್ಮ ಉದ್ದೇಶವಾಗಿದೆ~ ಎಂದು ಕೃಷ್ಣ ತಿಳಿಸಿದರು.ಮೆಟ್ರೊ ರೈಲು ಸಂಪರ್ಕ ಜಾಲ ವ್ಯವಸ್ಥೆಯಲ್ಲಿ ಯಶಸ್ವಿ ಜಂಟಿ ಸಹಕಾರದ ಬಳಿಕ ಇದೀಗ ಜಪಾನ್, ಭಾರತದಲ್ಲಿ ಅತಿ ವೇಗದ ಬುಲೆಟ್ ರೈಲು ಯೋಜನೆಗೆ ನೆರವು ನೀಡುವ ಪ್ರಸ್ತಾಪ ಮುಂದಿಟ್ಟಿದೆ.ದೆಹಲಿ, ಆಗ್ರಾ, ಬೆಂಗಳೂರು, ಚೆನ್ನೈ ಮಾರ್ಗ ಹಾಗೂ ಬೆಂಗಳೂರು -ಹೈದರಾಬಾದ್ ಮಾರ್ಗದಲ್ಲಿ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದ ಅಧ್ಯಯನ ವರದಿ ಸಿದ್ಧವಾಗಿರುವುದಾಗಿ ಜೆಂಬಾ ಈ ಸಂದರ್ಭದಲ್ಲಿ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.