ಭಾರತ- ಜರ್ಮನಿ ಪೈಪೋಟಿ ಇಂದು

7

ಭಾರತ- ಜರ್ಮನಿ ಪೈಪೋಟಿ ಇಂದು

Published:
Updated:

ನವದೆಹಲಿ (ಪಿಟಿಐ): ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಹಾಕಿ ವಿಶ್ವ ಲೀಗ್‌ ಫೈನಲ್ಸ್‌ ಟೂರ್ನಿಯ ಕೊನೆಯ ಲೀಗ್‌ ಪಂದ್ಯದಲ್ಲಿ ಸೋಮವಾರ ಜರ್ಮನಿ ವಿರುದ್ಧ ಪೈಪೋಟಿ ನಡೆಸಲಿದೆ.ಒಲಿಂಪಿಕ್‌ ಚಾಂಪಿಯನ್‌ ಜರ್ಮನಿ ತಂಡ ಆತಿಥೇಯರಿಗೆ ಕಠಿಣ ಸವಾಲಾಗಿ ಪರಿಣಮಿಸುವುದು ಖಚಿತ. ಈ ಪಂದ್ಯದಲ್ಲಿ ಗೆಲುವು ಪಡೆಯಬೇಕಾದರೆ ಭಾರತದ ಆಟಗಾರರು ಎಲ್ಲ ವಿಭಾಗಗಳಲ್ಲೂ ಚೇತರಿಕೆಯ ಪ್ರದರ್ಶನ ನೀಡುವುದು ಅನಿವಾರ್ಯ.ಸರ್ದಾರ್‌ ಸಿಂಗ್‌ ಬಳಗ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ 0-2 ರಲ್ಲಿ ಸೋಲು ಅನುಭವಿಸಿದ್ದರೆ, ಆ ಬಳಿಕ ನ್ಯೂಜಿಲೆಂಡ್‌ ಎದುರು 1-3 ರಲ್ಲಿ ಪರಾಭವಗೊಂಡಿತ್ತು. ಈ ಎರಡು ಸೋಲುಗಳಿಂದ ಆತ್ಮವಿಶ್ವಾಸ ಕಳೆದು ಕೊಂಡಿರುವ ಆಟಗಾರರು ಜರ್ಮನಿ ವಿರುದ್ಧ ಚೇತರಿಕೆಯ ಪ್ರದರ್ಶನ ನೀಡು ವರೇ ಎಂಬುದನ್ನು ನೋಡಬೇಕು.ಜರ್ಮನಿ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 6-1 ಅಂತರದ ಭರ್ಜರಿ ಗೆಲುವು ಪಡೆದಿತ್ತು. ಆದರೆ ಶನಿವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್‌ ಕೈಯಲ್ಲಿ 1-2 ರಲ್ಲಿ ಆಘಾತ ಅನುಭವಿಸಿತ್ತು.ಸೋಮವಾರ ನಡೆಯುವ ಇತರ ಪಂದ್ಯಗಳಲ್ಲಿ ನ್ಯೂಜಿಲೆಂಡ್‌- ಇಂಗ್ಲೆಂಡ್‌, ಆಸ್ಟ್ರೇಲಿಯಾ- ಅರ್ಜೆಂಟೀನಾ ಮತ್ತು ಹಾಲೆಂಡ್‌- ಬೆಲ್ಜಿಯಂ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry