ಭಾರತ ಟಾಸ್ ಜಯ: ಬ್ಯಾಟಿಂಗ್ ಆಯ್ಕೆ

7

ಭಾರತ ಟಾಸ್ ಜಯ: ಬ್ಯಾಟಿಂಗ್ ಆಯ್ಕೆ

Published:
Updated:

 ಬೆಂಗಳೂರು: ಹತ್ತನೇ ವಿಶ್ವ ಕಪ್ ಕ್ರಿಕೆಟ್  ‘ಬಿ’ ಗುಂಪಿನ ಪಂದ್ಯ ಭಾರತ ಮತ್ತು ಇಂಗ್ಲೆಂಡ್ ನಡುವೆ ಭಾನುವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಭಾರತ ತಂಡದ ನಾಯಕ ಮಹೇಂದ್ರಸಿಂಗ್ ಧೋನಿ ಟಾಸ್ ಜಯದೊಂದಿಗೆ ಬ್ಯಾಟಿಂಗ್‌ನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎರಡು ತಂಡಗಳು ಅತಿಯಾದ ಆತ್ಮವಿಶ್ವಾಸದಿಂದ ಕ್ರಿಡಾಂಗಣಕ್ಕೆ ಇಳಿದಿವೆ. ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತ ಬಾಂಗ್ಲಾದೇಶವನ್ನು ಮಣಿಸಿತ್ತು. ಅದೇ ರೀತಿ ಇಂಗ್ಲೆಂಡ್, ಹಾಲೆಂಡ್‌ನ್ನು ಮಣಿಸಿತ್ತು.ಭಾರತ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಕಳೆದ ಪಂದ್ಯದಲ್ಲಿ ಆಡಿದ್ದ ಶ್ರೀಶಾಂತ್ ಬದಲು ಪಿಯೂಷ್ ಚಾವ್ಲ ಅಂತಿಮ 11 ರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry