ಸೋಮವಾರ, ಮಾರ್ಚ್ 1, 2021
30 °C
ಹಾಕಿ: ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾ ಎದುರು ಇಂದು ಪೈಪೋಟಿ, ಸರ್ದಾರ್ ಪಡೆಗೆ ಜಯದ ವಿಶ್ವಾಸ

ಭಾರತ ತಂಡಕ್ಕೆ ಅಗ್ನಿಪರೀಕ್ಷೆಯ ಪಂದ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ತಂಡಕ್ಕೆ ಅಗ್ನಿಪರೀಕ್ಷೆಯ ಪಂದ್ಯ

ಆ್ಯಂಟ್‌ವರ್ಪ್‌, ಬೆಲ್ಜಿಯಂ (ಪಿಟಿಐ/ಐಎಎನ್ಎಸ್‌): ಹಿಂದಿನ ಮೂರೂ ಪಂದ್ಯಗಳಲ್ಲಿ ಉತ್ತಮ  ಸಾಮರ್ಥ್ಯ ನೀಡಿರುವ ಭಾರತಕ್ಕೆ ಈಗ ನಿಜವಾದ ಅಗ್ನಿಪರೀಕ್ಷೆ ಎದುರಾಗಿದೆ. ಭಾನುವಾರ ನಡೆಯಲಿರುವ ವಿಶ್ವ ಹಾಕಿ ಲೀಗ್ ಸೆಮಿಫೈನಲ್ಸ್‌ ಟೂರ್ನಿಯ ‘ಎ’ ಗುಂಪಿನ ಕೊನೆಯ ಲೀಗ್ ಪಂದ್ಯದಲ್ಲಿ ಸರ್ದಾರ್‌ ಪಡೆ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾದ ಸವಾಲು ಎದುರಿಸಲಿದೆ.ಲೀಗ್‌ ಹಂತದಲ್ಲಿ ಆಡಿರುವ ಮೂರು ಪಂದ್ಯಗಳಲ್ಲಿ ಭಾರತ ಎರಡರಲ್ಲಿ ಗೆಲುವು ಸಾಧಿಸಿದೆ. ಪಾಕಿಸ್ತಾನ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿತ್ತು. ಏಳು ಪಾಯಿಂಟ್ಸ್‌ ಹೊಂದಿರುವ ಭಾರತ ಎರಡನೇ ಸ್ಥಾನದಲ್ಲಿದೆ. ಶುಕ್ರವಾರ ನಡೆದ ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯಾ 4–0 ಗೋಲುಗಳಿಂದ ಪೋಲೆಂಡ್ ಎದುರು ಜಯ ಸಾಧಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಕ್ಕೇರಿದೆ. ಮೂರೂ ಪಂದ್ಯಗಳಲ್ಲಿ ಜಯ ಪಡೆದಿರುವ ಆಸ್ಟ್ರೇಲಿಯಾ ಒಂಬತ್ತು ಪಾಯಿಂಟ್ಸ್‌ನಿಂದ ಮೊದಲ ಸ್ಥಾನಕ್ಕೆ ಮರಳಿದೆ. ಈ ತಂಡ ಫ್ರಾನ್ಸ್‌, ಪಾಕಿಸ್ತಾನ ಹಾಗೂ ಪೋಲೆಂಡ್‌ ಎದುರು ಜಯ ಸಾಧಿಸಿತ್ತು.ಆಸ್ಟ್ರೇಲಿಯಾ ಸತತ ಮೂರು ಬಾರಿ ವಿಶ್ವಕಪ್‌ ಗೆದ್ದ ಹೆಗ್ಗಳಿಕೆ ಹೊಂದಿದೆ. ಹ್ಯಾಟ್ರಿಕ್‌ ಟ್ರೋಫಿಗಳನ್ನು ಜಯಿಸಿದ ಏಕೈಕ ತಂಡ ಎನ್ನುವ ಕೀರ್ತಿಯೂ ಈ ತಂಡದ ಹೆಸರಿನಲ್ಲಿದೆ.‘ವಿಶ್ವ ರ್‍ಯಾಂಕ್‌ನಲ್ಲಿ ಅಗ್ರಸ್ಥಾನ ಹೊಂದಿರುವ ತಂಡದ ಎದುರು ಗೆಲುವು ಪಡೆಯಲು ನಾವು ಸಾಕಷ್ಟು ಹೋರಾಟ ನಡೆಸಬೇಕು’ ಎಂದು ಭಾರತ ತಂಡದ ಕೋಚ್‌ ಪಾಲ್‌ ಆನ್‌ ಅಸ್ ಹೇಳಿದ್ದಾರೆ.ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿ ಒಲಿಂಪಿಕ್ಸ್‌ಗೆ ಈಗಾಗಲೇ ಅರ್ಹತೆ ಪಡೆದಿರುವ ಭಾರತದ ಮೇಲೆ ಒತ್ತಡವೇನಿಲ್ಲ. ಆದರೆ, ವಿಶ್ವದ ಶ್ರೇಷ್ಠ ತಂಡದ ಎದುರು ಗೆಲುವು ಪಡೆಯಬೇಕೆಂಬುದಷ್ಟೇ ಸರ್ದಾರ್ ಪಡೆಯ ಗುರಿಯಾಗಿದೆ. ಭಾರತ ವಿಶ್ವ ರ್‍ಯಾಂಕ್‌ನಲ್ಲಿ ಒಂಬತ್ತನೇ ಸ್ಥಾನದಲ್ಲಿದೆ.‘ಎರಡು ತಿಂಗಳ ಹಿಂದೆ ಮಲೇಷ್ಯಾದಲ್ಲಿ ನಡೆದ ಅಜ್ಲನ್‌ ಶಹಾ ಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 4–2 ಗೋಲುಗಳಿಂದ ಸೋಲಿಸಿದ್ದೆವು. ಆ ಗೆಲುವು ನಮ್ಮಲ್ಲಿ ಸ್ಫೂರ್ತಿ ತುಂಬಿದೆ. ಬಲಿಷ್ಠ ತಂಡವನ್ನು ಮತ್ತೊಮ್ಮೆ ಮಣಿಸುವ ವಿಶ್ವಾಸ ಮೂಡಿದೆ. ಪ್ರಬಲ ತಂಡದ ಎದುರು ಆಡಲು ಸಿಕ್ಕಿರುವ ಅವಕಾಶವನ್ನು ನಮ್ಮ ತಂಡದ ಯುವ ಆಟಗಾರರು ಸಮರ್ಥವಾಗಿ ಬಳಸಿಕೊಳ್ಳಬೇಕು’ ಎಂದು ಸರ್ದಾರ್‌ ಸಿಂಗ್‌ ಹೇಳಿದ್ದಾರೆ. 2014ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ 1–2 ಗೋಲುಗಳಿಂದ ಆಸ್ಟ್ರೇಲಿಯಾ ಎದುರು ಸೋಲು ಕಂಡಿತ್ತು.‘ಬಿ’ ಗುಂಪಿನಲ್ಲಿ ಬೆಲ್ಜಿಯಂ ಅಗ್ರಸ್ಥಾನದಲ್ಲಿದೆ. ಮಲೇಷ್ಯಾ, ಬ್ರಿಟನ್‌, ಐರ್ಲೆಂಡ್‌ ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದಿವೆ. ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಸೋಲು ಕಂಡಿರುವ ಚೀನಾ ಟೂರ್ನಿಯಿಂದ ಹೊರಬಿದ್ದಿದೆ. ‘ಎ’ ಗುಂಪಿನಿಂದ ಆಸ್ಟ್ರೇಲಿಯಾ, ಭಾರತ, ಪಾಕಿಸ್ತಾನ ಮತ್ತು ಫ್ರಾನ್ಸ್‌ ಎಂಟರ ಘಟ್ಟಕ್ಕೆ ಅರ್ಹತೆ ಪಡೆದಿವೆ.ಯಾರ ಎದುರು ಕ್ವಾರ್ಟರ್‌ ಫೈನಲ್‌?

ನಿಗದಿತ ಅವಧಿಯಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲುಗಳು ಬರಲಿಲ್ಲ. 113ನೇ ನಿಮಿಷದಲ್ಲಿ ಗೋಲು ಗಳಿಸಿದ ಮಾರಿಯೊ ಗೋಟ್ಜೆ ಜಯದ ರೂವಾರಿ ಎನಿಸಿದರು. ನಿಗದಿತ ಅವಧಿಯಲ್ಲಿ ಉಭಯ  ಅವಧಿಯಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲುಗಳು ಬರಲಿಲ್ಲ. 113ನೇ   ನಿಗದಿತ ಅವಧಿಯಲ್ಲಿ ಉಭಯ ತಂಡಗಳಿಂದ ಯಾವುದೇ ಗೋಲುಗಳು ಬರಲಿಲ್ಲ. 113ನೇ ನಿಮಿಷದಲ್ಲಿ ಗೋಲು ಗಳಿಸಿದ ಮಾರಿಯೊ ಗೋಟ್ಜೆ ಜಯದ ರೂವಾರಿ ಎನಿಸಿದರು.

ನಿಗದಿತ ಎಲ್ಲಾ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಒಂದೇ ದಿನದಲ್ಲಿ ಮುಗಿಯಲಿವೆ. ಆಡಿರುವ ಎಲ್ಲಾ ಪಂದ್ಯಗಳಲ್ಲಿ ಸೋಲು ಕಂಡಿರುವ ಪೋಲೆಂಡ್ ಮತ್ತು ಚೀನಾ ತಂಡಗಳು ಒಂಬತ್ತನೇ ಸ್ಥಾನ ನಿರ್ಧರಿಸಲು ನಡೆಯುವ ಪಂದ್ಯದಲ್ಲಿ ಹೋರಾಟ ನಡೆಸಲಿವೆ.

ಜುಲೈ ಐದರಂದು ಸೆಮಿಫೈನಲ್‌ ನಡೆಯಲಿದೆ. ಫೈನಲ್‌ ಐದರಂದು ಜರುಗಲಿದೆ. ಭಾನುವಾರ ನಡೆಯುವ ‘ಎ’ ಗುಂಪಿನ ಇನ್ನೊಂದು ಪಂದ್ಯದಲ್ಲಿ ಪಾಕಿಸ್ತಾನ–ಫ್ರಾನ್ಸ್ ಪೈಪೋಟಿ ನಡೆಸಲಿವೆ. ‘ಬಿ’ ಗುಂಪಿನ ಹೋರಾಟದಲ್ಲಿ ಮಲೇಷ್ಯಾ–ಬ್ರಿಟನ್‌ ಮತ್ತು ಬೆಲ್ಜಿಯಂ–ಐರ್ಲೆಂಡ್‌ ಮುಖಾಮುಖಿಯಾಗಲಿವೆ.

*******************

ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಕೆಲ ಪೆನಾಲ್ಟಿ ಕಾರ್ನರ್‌ ಅವಕಾಶ ಬಳಸಿಕೊಳ್ಳುವಲ್ಲಿ ವಿಫಲವಾದೆವು. ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾದ ಎದುರು ಹಿಂದಿನ ತಪ್ಪು ಮಾಡಬಾರದು.

-ಪಾಲ್‌ ಆನ್‌ ಅಸ್, ಭಾರತ ಹಾಕಿ ತಂಡದ ಕೋಚ್‌

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.