ಭಾರತ ತಂಡಕ್ಕೆ ಅಚ್ಚರಿ ಗೆಲುವು

7
ಫುಟ್‌ಬಾಲ್‌: ಲೆಬನಾನ್‌ಗೆ ಆಘಾತ

ಭಾರತ ತಂಡಕ್ಕೆ ಅಚ್ಚರಿ ಗೆಲುವು

Published:
Updated:

ಕುವೈತ್‌ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ 16 ವರ್ಷದೊಳಗಿನವರ ಏಷ್ಯನ್‌ ಫೆಡರೇಷನ್‌ ಒಕ್ಕೂಟ (ಎಎಫ್‌ಸಿ) ಕ್ವಾಲಿಫೈಯರ್ಸ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಲೆಬನಾನ್‌ಗೆ ಆಘಾತ ನೀಡಿದ್ದಾರೆ.ಅಲಿ ಸಬಾ ಅಲ್‌ ಸಲೀಮ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 4–1 ಗೋಲುಗಳಿಂದ ಲೆಬನಾನ್‌ ತಂಡವನ್ನು ಪರಾಭವಗೊಳಿಸಿತು.ವಿರಾಮದ ವೇಳೆ ಭಾರತದವರು 2–0 ಗೋಲುಗಳಿಂದ ಮುನ್ನಡೆ ಹೊಂದಿದ್ದರು. ನೂರುದ್ದಿನ್‌ (9ನೇ ನಿಮಿಷ), ಜಯಾನಂದ ಸಿಂಗ್‌ (43ನೇ ನಿ.), ಅನಿರುಧ್‌ ಥಾಪಾ (61ನೇ ನಿ.) ಹಾಗೂ ಬೇದೇಶ್ವರ್‌ ಸಿಂಗ್‌ (65ನೇ ನಿ.) ಚೆಂಡನ್ನು ಗುರಿ ಸೇರಿಸಿದರು. ಲೆಬನಾನ್‌ ತಂಡದ ಅಲಿ ಖಾರೌಬಿ (58ನೇ ನಿ.) ಗೋಲು ಗಳಿಸಿದರು.ಈ ಪಂದ್ಯದ ಮೇಲೆ ಪೂರ್ಣ ಹತೋಟಿ ಸಾಧಿಸಿದ್ದು ಭಾರತ. ಅದರಲ್ಲೂ ನೂರುದ್ದೀನ್‌ ಗಮನಾರ್ಹ ಆಟ ಪ್ರದರ್ಶಿಸಿದರು. ಅಷ್ಟಾಗಿಯೂ ಭಾರತ ಹಲವು ಅವಕಾಶಗಳನ್ನು ಕಳೆದುಕೊಂಡಿತು.ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ಪ್ರಾದೇಶಿಕ ಅಕಾಡೆಮಿಯನ್ನು ಪ್ರತಿನಿಧಿಸುತ್ತಿರುವ ಈ ಆಟಗಾರರು ತಮ್ಮ ಮೊದಲ ಪಂದ್ಯದಲ್ಲಿ ತಾಜಿಕಿಸ್ತಾನ ಎದುರು ಡ್ರಾ ಸಾಧಿಸಿದ್ದರು.ಒಟ್ಟು ನಾಲ್ಕು ಪಾಯಿಂಟ್‌ ಹೊಂದಿರುವ ಈ ತಂಡದವರು ತಮ್ಮ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದವರು ತಮ್ಮ ಮುಂದಿನ ಪಂದ್ಯದಲ್ಲಿ ಶುಕ್ರವಾರ ಭೂತಾನ್‌ ಎದುರು ಆಡಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry