ಭಾರತ ತಂಡಕ್ಕೆ ಜಯ

7
ಕ್ರಿಕೆಟ್‌: ದೀಪಕ್‌ ಆಲ್‌ರೌಂಡ್‌ ಆಟ

ಭಾರತ ತಂಡಕ್ಕೆ ಜಯ

Published:
Updated:

ವಿಶಾಖಪಟ್ಟಣ (ಪಿಟಿಐ): ದೀಪಕ್‌ ಹೂಡಾ ತೋರಿದ ಆಲ್‌ರೌಂಡ್‌ ಆಟದ ನೆರವಿನಿಂದ ಭಾರತ 19 ವರ್ಷ ವಯಸ್ಸಿನೊಳಗಿನವರ ತಂಡ ಚತುಷ್ಕೋನ ಕ್ರಿಕೆಟ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.ಎಸಿಎ- ವಿಡಿಸಿಎ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಭಾರತ 148 ರನ್‌ಗಳಿಂದ ಜಿಂಬಾಬ್ವೆ ತಂಡವನ್ನು ಮಣಿಸಿತು.

ಮೊದಲು ಬ್ಯಾಟ್‌ ಮಾಡಿದ ವಿಜಯ್‌ ಜೋಲ್‌ ಬಳಗ 50 ಓವರ್‌ಗಳಲ್ಲಿ 6 ವಿಕೆಟ್‌ಗೆ 291 ರನ್‌ ಪೇರಿಸಿತು. ಹೂಡಾ (ಅಜೇಯ 83, 55 ಎಸೆತ, 5 ಬೌಂ, 5 ಸಿಕ್ಸರ್‌) ಮತ್ತು ಸರ್ಫರಾಜ್‌ ಖಾನ್‌ (55, 55 ಎಸೆತ) ಉತ್ತಮ ಆಟ ತೋರಿದರು.ಈ ಗುರಿ ಬೆನ್ನಟ್ಟಿದ ಜಿಂಬಾಬ್ವೆ 41.2 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲೌಟಾಯಿತು. 43 ರನ್‌ಗಳಿಗೆ 4 ವಿಕೆಟ್‌ ಪಡೆದ ಕುಲದೀಪ್‌ ಯಾದವ್‌ ಭಾರತದ ಪರ ಯಶಸ್ವಿ ಬೌಲರ್‌ ಎನಿಸಿಕೊಂಡರು. ಹೂಡಾ ಮತ್ತು ಸರ್ಫರಾಜ್‌ ತಲಾ ಎರಡು ವಿಕೆಟ್‌ ತಮ್ಮದಾಗಿಸಿಕೊಂಡರು.ಸಂಕ್ಷಿಪ್ತ ಸ್ಕೋರ್‌: ಭಾರತ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 291 (ಅಂಕುಶ್‌ ಬೈನ್ಸ್‌ 49, ಶ್ರೇಯಸ್‌ ಅಯ್ಯರ್‌ 28, ಸರ್ಫರಾಜ್‌ ಖಾನ್‌ 55, ದೀಪಕ್‌ ಹೂಡಾ ಔಟಾಗದೆ 83, ಕೀರನ್‌ ಗೇಲ್‌ 32ಕ್ಕೆ 3, ಲೂಕ್‌ ಜಾಂಗ್ವೆ 59ಕ್ಕೆ 2)ಜಿಂಬಾಬ್ವೆ: 41.2 ಓವರ್‌ಗಳಲ್ಲಿ 143 (ಡೈಲಾನ್‌ ನೆಲ್‌ 22, ರ್‍ಯಾನ್‌ ಬರ್ಲ್‌ 46, ಡೆವೆನ್‌ ಬೆಲ್‌ 13, ಕುಲದೀಪ್‌ ಯಾದವ್‌ 34ಕ್ಕೆ 4, ಸರ್ಫರಾಜ್‌ ಖಾನ್‌ 9ಕ್ಕೆ 2, ಅಮಿರ್‌ ಗನಿ 37ಕ್ಕೆ 2,  ದೀಪಕ್‌ ಹೂಡಾ 37ಕ್ಕೆ 2) ಫಲಿತಾಂಶ: ಭಾರತ ‘ಎ’ ತಂಡಕ್ಕೆ 148 ರನ್‌ ಗೆಲುವು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry