ಭಾನುವಾರ, ಮೇ 16, 2021
27 °C

ಭಾರತ ತಂಡದಲ್ಲಿ ಆಡುವ ವಿಶ್ವಾಸದಲ್ಲಿ ಶ್ರೀಶಾಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಚ್ಚಿ (ಪಿಟಿಐ): ಐಪಿಎಲ್ ಸ್ಟಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿರುವ ಕೇರಳದ ವೇಗಿ ಎಸ್.ಶ್ರೀಶಾಂತ್, ರಾಷ್ಟ್ರೀಯ ತಂಡದಲ್ಲಿ ಮತ್ತೆ ಆಡುವ ವಿಶ್ವಾಸ ಹೊಂದಿರುವುದಾಗಿ ನುಡಿದಿದ್ದಾರೆ.`ಎಂದಿಗೂ ವಿಶ್ವಾಸ ಕಳೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನಾನು ನಿಮಗೆ ನೀಡುತ್ತೇನೆ. ಕ್ರಿಕೆಟ್ ಆಡುವುದು ನನ್ನ ಪ್ರಮುಖ ಕನಸು. ರಾಷ್ಟ್ರೀಯ ತಂಡದಲ್ಲಿ ಮತ್ತೆ ಆಡಲು ಪ್ರಯತ್ನಿಸುತ್ತೇನೆ. ಈ ವರ್ಷದ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಆಡಬೇಕು ಎಂಬ ಕನಸು ಹೊಂದಿದ್ದೇನೆ. ಆದರೆ ಅದರ ಬಗ್ಗೆ ಈಗಲೇ ಏನನ್ನೂ ಹೇಳಲಾಗದು. ಶೀಘ್ರವೇ ಅಭ್ಯಾಸ ಆರಂಭಿಸುತ್ತೇನೆ' ಎಂದು ಅವರು ಬುಧವಾರ ತವರೂರಿಗೆ ಮರಳಿದ ಬಳಿಕ ಹೇಳಿದ್ದಾರೆ.ಇಲ್ಲಿಗೆ ಸಮೀಪದ ತ್ರಿಪುನಿತುರಾದಲ್ಲಿನ ತಮ್ಮ ಮನೆಗೆ ಬಂದ ಅವರನ್ನು ಪೋಷಕರು ಅಪ್ಪಿಕೊಂಡು ಮುದ್ದಾಡಿದರು. ತಾಯಿ ಸಾವಿತ್ರಿ ಊಟ ಬಡಿಸಿದರು. ಸಹೋದರಿ ಕೂಡ ಶ್ರೀಶಾಂತ್ ಯೋಗಕ್ಷೇಮ ವಿಚಾರಿಸಿದರು.

`ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ಬಂಧಿಸಿರುವುದರ ಹಿಂದೆ ದೊಡ್ಡ ಕುತಂತ್ರ ಅಡಗಿದೆ. ಅದು ಸದ್ಯದಲ್ಲೇ ಬಹಿರಂಗವಾಗಲಿದೆ' ಎಂದರು.ನ್ಯಾಯದ ವಿಶ್ವಾಸ: ಸೂಕ್ತ ನ್ಯಾಯ ದೊರಕುವ ವಿಶ್ವಾಸವಿದೆ ಎಂದು ಪ್ರಕರಣದ ಮತ್ತೊಬ್ಬ ಆರೋಪಿ ಅಂಕಿತ್ ಚವಾಣ್ ನುಡಿದಿದ್ದಾರೆ.`ನ್ಯಾಯಾಂಗ ವ್ಯವಸ್ಥೆಯಲ್ಲಿ ನನಗೆ ನಂಬಿಕೆ ಇದೆ. ಸೂಕ್ತ ನ್ಯಾಯ ದೊರಕಲಿದೆ ಎಂಬ ಭರವಸೆಯಲ್ಲಿ ನಾನಿದ್ದೇನೆ. ಕಷ್ಟಕಾಲದಲ್ಲಿ ನನ್ನ ನೆರವಿಗೆ ನಿಂತ ಕುಟುಂಬ ವರ್ಗದವರಿಗೆ ನಾನು ಸದಾ ಅಭಾರಿ' ಎಂದು ಆಫ್ ಸ್ಪಿನ್ನರ್ ಚವಾಣ್ ಹೇಳಿದ್ದಾರೆ.ವಿವಾಹದ ಕಾರಣ ಈ ತಿಂಗಳ ಆರಂಭದಲ್ಲಿ ಅವರಿಗೆ ದೆಹಲಿ ನ್ಯಾಯಾಲಯ ಜಾಮೀನು ನೀಡಿತ್ತು. ಅ ಅವಧಿಯಲ್ಲಿ ನೇಹಾ ಅವರನ್ನು ವಿವಾಹವಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.