ಭಾರತ ತಂಡದಲ್ಲಿ ಕರ್ನಾಟಕದ ಮೂವರು

ಬುಧವಾರ, ಜೂಲೈ 17, 2019
28 °C

ಭಾರತ ತಂಡದಲ್ಲಿ ಕರ್ನಾಟಕದ ಮೂವರು

Published:
Updated:

ಬೆಂಗಳೂರು: ಕರ್ನಾಟಕದ ಅನೂಪ್ ಡಿ ಕೋಸ್ತಾ, ಕಾರ್ತಿಕ್ ಮತ್ತು ವಿನಾಯಕ್ ಅವರು ಟ್ಯುನೀಷ್ಯದ ಕೆಲಿಬಿಯಾದಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಭಾರತ ಜೂನಿಯರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.12 ಸದಸ್ಯರ ತಂಡವನ್ನು ಶನಿವಾರ ಪ್ರಕಟಿಸಲಾಯಿತು. ಭಾರತ ತಂಡ ಇಂದು ಟ್ಯುನೀಷ್ಯಕ್ಕೆ ಪ್ರಯಾಣಿಸಲಿದೆ ಎಂದು ಭಾರತ ವಾಲಿಬಾಲ್ ಫೆಡರೇಷನ್ ಪ್ರಕಟಣೆ ತಿಳಿಸಿದೆ.ತಂಡ ಹೀಗಿದೆ: ಅನೂಪ್ ಡಿ ಕೋಸ್ತಾ, ಕಾರ್ತಿಕ್, ವಿನಾಯಕ್ (ಕರ್ನಾಟಕ), ಸುರೇಶ್ ಕೆ., ನರೇಂದರ್ ಕುಮಾರ್ (ರೈಲ್ವೇಸ್), ಮರ್ಸದ್ ಸುಹೇಲ್, ಶ್ರಾವಣ್ ಯಾದವ್, ಅಮಿತ್ ಸಿನ್ಹಾ (ತಮಿಳುನಾಡು), ದೀಪೇಶ್ ಕುಮಾರ್ ಸಿನ್ಹಾ (ಛತ್ತೀಸ್‌ಗಡ), ಸತ್ನಮ್ ಸಿಂಗ್, ಹರ್ಮಿಂದರ್‌ಪಾಲ್ ಸಿಂಗ್, ಅಮನ್‌ದೀಪ್ ಕುಮಾರ್ (ಪಂಜಾಬ್)ಅಧಿಕಾರಿಗಳು: ಟಿ.ಸಿ. ಜೋತಿಷ್ (ಮುಖ್ಯ ಕೋಚ್), ಸಜಾದ್ ಹುಸೇನ್, ಎಸ್.ಪಿ. ಸಿಂಗ್ (ಸಹಾಯಕ ಕೋಚ್), ಅಸ್ಲಮ್ ಮುಜಾವರ್ (ಫಿಸಿಯೊ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry