ಭಾರತ ತಂಡದ ಗೆಲುವಿಗೆ ಪ್ರಾರ್ಥನೆ!

7

ಭಾರತ ತಂಡದ ಗೆಲುವಿಗೆ ಪ್ರಾರ್ಥನೆ!

Published:
Updated:
ಭಾರತ ತಂಡದ ಗೆಲುವಿಗೆ ಪ್ರಾರ್ಥನೆ!

ಸಂಗಮ್ (ಜಮ್ಮು-ಕಾಶ್ಮೀರ), (ಪಿಟಿಐ): ಮುಂದಿನ ವಾರ ಆರಂಭ ವಾಗಲಿರುವ ಐಸಿಸಿ ವಿಶ್ವಕಪ್ ಟೂರ್ನಿ ಯಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲುವಂತೆ ದೇಶದ ತುಂಬಾ ಕ್ರಿಕೆಟ್ ಅಭಿಮಾನಿ ಗಳು ದೇವರನ್ನು ಪ್ರಾರ್ಥಿಸುತ್ತಿದ್ದಾರೆ. ಈ ಪ್ರಕ್ರಿಯೆಯಲ್ಲಿ ಕಾಶ್ಮೀರದ ಬ್ಯಾಟ್ ತಯಾರಿಕಾ ಸಂಸ್ಥೆಗಳೂ ಹಿಂದೆ ಬಿದ್ದಿಲ್ಲ!ಮಹೇಂದ್ರಸಿಂಗ್ ದೋನಿ ಬಳಗ ಈ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಬ್ಯಾಟುಗಳ ಬಂಪರ್ ಮಾರಾಟ ಸಾಧ್ಯವಾಗಲಿದೆ. ಕಳೆದ ವರ್ಷ ಕಾಶ್ಮೀರ ಕೊಳ್ಳದಲ್ಲಿ ನಡೆದ ಹಿಂಸಾಕೃತ್ಯಗಳಿಂದಾಗಿ ಆದ ನಷ್ಟವನ್ನು ಇದರಿಂದ ತುಂಬಿಕೊಳ್ಳಬಹುದು ಎಂಬ ಆಸೆ ಬ್ಯಾಟ್ ತಯಾರಕರದ್ದು ‘ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾಗಿಬಿಟ್ಟರೆ ದಕ್ಷಿಣ ಕಾಶ್ಮೀರ ದಲ್ಲಿ ತಯಾರಾಗುವ ನಮ್ಮ ಬ್ಯಾಟುಗಳ ಮಾರಾಟ  ಕುದುರುವುದು ಖಚಿತ’ ಎಂದು ಕ್ರಿಕೆಟ್ ಬ್ಯಾಟ್ ತಯಾರಕರ ಸಂಘದ ಅಧ್ಯಕ್ಷ ಅಬ್ದುಲ್ ಮಜೀದ್ ದಾರ್ ಆಶಯ ವ್ಯಕ್ತಪಡಿಸುತ್ತಾರೆ.ಪ್ರವಾಸಿಗರು ಇಲ್ಲಿಂದ ಮರಳುವಾಗ ಸವಿನೆನಪಿಗಾಗಿ ಬ್ಯಾಟ್‌ಗಳನ್ನು ತಮ್ಮ ದೇಶಕ್ಕೆ ಒಯ್ಯುತ್ತಾರೆ. ಆದರೆ ಕಳೆದ ವರ್ಷದ ಬೇಸಿಗೆಯಲ್ಲಿ ಹಿಂಸಾತ್ಮಕ ಪ್ರತಿ ಭಟನೆಗಳಿಂದಾಗಿ ಉತ್ಪಾದನೆ ಕುಂಠಿತ ವಾಗಿತ್ತು. 15000 ಕುಶಲ ಮತ್ತು ಅರೆಕುಶಲ ಕಾರ್ಮಿಕರು ಬ್ಯಾಟ್ ಉತ್ಪಾದನಾ ಘಟಕಗಳಲ್ಲಿ ಭರದಿಂದ ಕೆಲಸ ಮಾಡುತ್ತಿದ್ದಾರೆ. ಫೆಬ್ರುವರಿ 19ರಿಂದ ಆರಂಭವಾಗಲಿರುವ ಟೂರ್ನಿಯ ಫೈನಲ್‌ಗೆ ಭಾರತ ತಲುಪಲಿ ಎನ್ನುವ ಆಶಯ ಅವರದ್ದು.ಈ ಕಾರ್ಮಿಕರ ಪೈಕಿ ಕೆಲವರು ಕಳೆದ ವರ್ಷದ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಆದರೆ, ಇದೀಗ ಆರ್ಥಿಕ ಲಾಭದ ದೃಷ್ಟಿಕೋನದಿಂದ ರಾಷ್ಟ್ರೀಯ ತಂಡದ ಉತ್ತಮ ಸಾಧನೆಗಾಗಿ ಪ್ರಾರ್ಥಿಸುತ್ತಿದ್ದಾರೆ.“ಭಾರತ ಉತ್ತಮ ಪ್ರದರ್ಶನ ನೀಡಿದರೆ ಇಡೀ ದೇಶದಲ್ಲಿ ಕ್ರಿಕೆಟ್ ಜ್ವರ ತಾರಕಕ್ಕೇರುತ್ತದೆ. ಇದರಿಂದ ಬ್ಯಾಟು ಗಳ ಮಾರಾಟ ಕೂಡ ಹೆಚ್ಚುತ್ತದೆ. 2003ರಲ್ಲಿ ಭಾರತ ಫೈನಲ್‌ಗೆ ತಲು ಪಿದ್ದ ಸಂದರ್ಭದಲ್ಲಿ ಬ್ಯಾಟುಗಳಿಗೆ ಎರ ಡೂವರೆ ಪಟ್ಟು ಬೇಡಿಕೆ ಹೆಚ್ಚಾಗಿತ್ತು” ಎಂದು ಬ್ಯಾಟ್ ಉತ್ಪಾದನಾ ಘಟಕದ ಮಾಲೀಕ ಮೊಹಮ್ಮದ್ ಅಮಿನ್ ಹೇಳುತ್ತಾರೆ.  “ಬ್ಯಾಟುಗಳಿಗೆ ಬೇಡಿಕೆ ಕುದುರಿದರೆ ವರ್ಷಪೂರ್ತಿ ಕೈತುಂಬಾ ಕೆಲಸ ಸಿಗುವುದು ಖಚಿತ.” ಎನ್ನುತ್ತಾರೆ ಕಾರ್ಮಿಕ ಗುಲಾಮ್ ಮೊಹಿಯು ್ದದೀನ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry