ಸೋಮವಾರ, ಮೇ 10, 2021
21 °C

ಭಾರತ ತಂಡದ ಮೊದಲ ಎದುರಾಳಿ ಕಜಕಸ್ತಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಸೆಪ್ಟೆಂಬರ್ 16 ರಿಂದ 25ರ ವರೆಗೆ ನಡೆಯುವ 18 ವರ್ಷ ವಯಸ್ಸಿನೊಳಗಿನವರ ಏಷ್ಯಾ ಕಪ್ ಬಾಲಕಿಯರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಭಾರತ ತಂಡದವರು `ಬಿ~ ಗುಂಪಿನ ಲೀಗ್ ಉದ್ಘಾಟನಾ ಪಂದ್ಯದಲ್ಲಿ ಕಜಕಸ್ತಾನವನ್ನು ಎದುರಿಸಲಿದ್ದಾರೆ.`ಬಿ~ ಗುಂಪಿನಲ್ಲಿ ಭಾರತ ತಂಡದವರು ಚೀನಾ, ಮಲೇಷ್ಯಾ, ಶ್ರೀಲಂಕಾ ಮತ್ತು ಕಜಕಸ್ತಾನ ವಿರುದ್ಧ ಆಡಲಿದ್ದಾರೆ. `ಎ~ ಗುಂಪಿನಲ್ಲಿ ಕೊರಿಯಾ, ಜಪಾನ್, ಥಾಯ್ಲೆಂಡ್, ಸಿಂಗಪುರ ಮತ್ತು ಚೀನಾ ತೈಪೆ ತಂಡ ಇದೆ.ಈ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸುವ ಭಾರತ ತಂಡಕ್ಕೆ ಆಯ್ಕೆ ಮಾಡಲಾದ ಆಟಗಾರ್ತಿಯರ ಪಟ್ಟಿಯನ್ನು  ಹಾಕಿ ಇಂಡಿಯಾ ಶುಕ್ರವಾರ ಬಿಡುಗಡೆ ಮಾಡಿತು.ತಂಡ: ಗೋಲ್‌ಕೀಪರ್ಸ್‌: ಬಿಗಾನ್ ಸೊಯ್, ಸ್ವಾತಿ;  ಡಿಫೆಂಡರ್ಸ್‌: ಜಸ್ಪ್ರೀತ್ ಕೌರ್, ಸಂದೀಪ್ ಕೌರ್, ಅಪೂರ್ವ ವಿಶ್ವಕರ್ಮ, ಬಲ್ವಿಂದರ್ ಕೌರ್ ಮೆಹ್ರಾ, ದೀಪ್ ಗ್ರೇಸ್ ಎಕ್ಕಾ; ಮಿಡ್‌ಫೀಲ್ಡರ್ಸ್‌: ಪೂನಂ ರಾಣಿ (ನಾಯಕಿ), ನೇಹಾ, ನಮಿತಾ ಟೊಪೊ, ನಿಕ್ಕಿ ಪ್ರಧಾನ್, ಶಿವಾನಿ; ಫಾರ್ವರ್ಡ್ಸ್: ನೆಹಾ ಗೋಯಲ್, ನವಜೋತ್ ಕೌರ್, ಸುರಭಿ ಪ್ರಧಾನ್, ಅನೂಪಾ ಬಾರ್ಲಾ, ನಿಲಿಮಾ ಮಿಂಜ್, ಆರ್. ರೇಣುಕಾ.; ಸ್ಟ್ಯಾಂಡ್ ಬೈ: ಎಂ. ಕಿರಣ್ ದೇವಿ, ಸೋನಮ್ ಭಾರದ್ವಾಜ್, ಡಿ.ಎಸ್. ಹರಿನಾಕ್ಷಿ.ಮ್ಯಾನೇಜರ್: ಡಾ. ಶೋಭಾ ಸಿಂಗ್, ಮುಖ್ಯ ಕೋಚ್: ಕರ್ನಾಟಕದ ಬಿ.ಕೆ. ಸುಬ್ರಮಣಿ, ಸಹಾಯಕ ಕೋಚ್: ಎನ್.ಎಸ್. ಸೈನಿ.ಭಾರತದ ವೇಳಾಪಟ್ಟಿ: ಸೆ. 6- ಭಾರತ-ಕಜಕಸ್ತಾನ, ಸೆ. 17- ಭಾರತ-ಶ್ರೀಲಂಕಾ, ಸೆ. 20- ಭಾರತ-ಚೀನಾ, ಸೆ. 22- ಭಾರತ-ಮಲೇಷ್ಯಾ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.