ಭಾರತ- ನೇಪಾಳ ಮುಕ್ತ ಗಡಿಯಲ್ಲಿ ಸಲೀಸಾಗಿ ಓಡಾಟ

7
ವಿಚಾರಣೆ ವೇಳೆ ಉಗ್ರ ಯಾಸೀನ್ ಬಹಿರಂಗ

ಭಾರತ- ನೇಪಾಳ ಮುಕ್ತ ಗಡಿಯಲ್ಲಿ ಸಲೀಸಾಗಿ ಓಡಾಟ

Published:
Updated:

ಮೋತಿಹಾರಿ (ಬಿಹಾರ) (ಪಿಟಿಐ): ಪೊಲೀಸರು ಬಂಧಿಸಿರುವ ಇಂಡಿಯನ್ ಮುಜಾಹಿದೀನ್ ಸಹ ಸ್ಥಾಪಕ ಯಾಸೀನ್ ಭಟ್ಕಳ ಹಾಗೂ ಈತನ ಸಹಚರ ಅಸಾದುಲ್ಲಾ ಅಖ್ತರ್, ಭಾರತ -ನೇಪಾಳ ಗಡಿಯ ಅನಿರ್ಬಂಧಿತ ಮಾರ್ಗವನ್ನು ರಹಸ್ಯವಾಗಿ ಸಂಚರಿಸಲು ಬಳಸುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ. ಈ ಪ್ರದೇಶ ಬಿಹಾರದಲ್ಲಿದೆ. ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ನಹರ್ ಚೌಕ್ ಸಮೀಪ ಈ ಇಬ್ಬರನ್ನೂ ಬಂಧಿಸಿದ ನಂತರ ನಡೆಸಿದ ವಿಚಾರಣೆ ವೇಳೆ ಈ ವಿಷಯ ಬಹಿರಂಗವಾಗಿದೆ.ಎರಡೂ ದೇಶಗಳ ನಡುವೆ ಯಾವುದೇ ತೊಂದರೆ ಇಲ್ಲದೆ ಸಂಚರಿಸಲು ಈ ಇಬ್ಬರೂ ಪದೇ ಪದೇ ಅನಿರ್ಬಂಧಿತ ಮಾರ್ಗವನ್ನು ಬಳಸಿ ಕೊಂಡಿದ್ದರು ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ.ಬಿಹಾರದ ರಕ್ಸೌಲ್‌ನಿಂದ ನೇಪಾಳದ ಬೀರ್‌ಗಂಜ್‌ಗೆ ಆಟೊ ಮೂಲಕ ತೆರಳಲು ಕೇವಲ ರೂ. 35 ನೀಡಿದರೆ ಸಾಕು ಎನ್ನುತ್ತಾರೆ ಇಲ್ಲಿನ ಸ್ಥಳೀಯರು. ಎರಡೂ ದೇಶಗಳ ಗಡಿಯಲ್ಲಿ ಸರತಿಯಲ್ಲಿ ನಿಂತಿರುವ ಆಟೊ ಚಾಲಕರು ಪ್ರಯಾಣಿಕರಿಗೆ ರೂ.12 ಅನ್ನು ವಿಧಿಸುತ್ತಾರೆ. ಈ ಮಾರ್ಗದ ಮೂಲಕ ಎರಡೂ ದೇಶಗಳ ನಡುವೆ ಸಂಚರಿಸಲು ಪಾಸ್‌ಪೋರ್ಟ್ ಅಥವಾ ಇತರ ಯಾವುದೇ ಪ್ರವಾಸಿ ದಾಖಲಾತಿಗಳ ಅಗತ್ಯವೇ ಇಲ್ಲ.ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿದ್ದರೂ, ಗಡಿ ಒತ್ತುವರಿ ಹಾಗೂ ಕಂಬಗಳಿಗಾದ ಹಾನಿಯ ಕುರಿತು ಚರ್ಚೆ ನಡೆಸುತ್ತದೆ.`ಎರಡೂ ದೇಶಗಳ ನಡುವಿನ ಗಡಿಭಾಗದಲ್ಲಿ ಜನರ ಮುಕ್ತ ಸಂಚಾರವೇ ಎಲ್ಲ ಸಮಸ್ಯೆಗೆ ಕಾರಣವಾಗುತ್ತಿದೆ' ಎನ್ನುತ್ತಾರೆ ಸಶಸ್ತ್ರ ಸೀಮಾಬಲದ ಕಮಾಂಡರ್ ವಿಕ್ರಂ ಸಿಂಗ್ ಠಾಕೂರ್.ಗಡಿಯ ಉಭಯ ಭಾಗದ ನಡುವೆ ಆಹಾರ ಧಾನ್ಯ, ಬಟ್ಟೆ ಸೇರಿದಂತೆ ದಿನೋಪಯೋಗಿ ವಸ್ತುಗಳ ಸಾಗಣೆಯೂ ಆಗುತ್ತದೆ. ರಕ್ಸೌಲ್ ಹಾಗೂ ಮೋತಿಹಾರಿಯ ಹಲವರು ಬಿರ್‌ಗಂಜ್‌ನಲ್ಲಿ ಅಂಗಡಿಯನ್ನೂ ಹೊಂದಿದ್ದಾರೆ. ಗಡಿಯ ಅನಿರ್ಬಂಧಿತ ಪ್ರದೇಶ ಎರಡೂ ದೇಶಗಳ ನಡುವಿನ ಜನರ ವೈವಾಹಿಕ ಸಂಬಂಧಗಳಿಗೂ ಅವಕಾಶ ಕಲ್ಪಿಸಿದೆ. ಗಡಿಭಾಗದ ಕೆಲವರು ದ್ವಿಪೌರತ್ವವನ್ನೂ ಹೊಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry