ಭಾರತ- ಪಾಕ್ ಎರಡನೇ ಟಿ-20 ಪಂದ್ಯ ಮುಂದೂಡಿಕೆ

7

ಭಾರತ- ಪಾಕ್ ಎರಡನೇ ಟಿ-20 ಪಂದ್ಯ ಮುಂದೂಡಿಕೆ

Published:
Updated:

ನವದೆಹಲಿ (ಪಿಟಿಐ): ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಅಹಮದಾಬಾದ್‌ನಲ್ಲಿ ನಡೆಯುವ ಎರಡನೇ ಟ್ವೆಂಟಿ-20 ಕ್ರಿಕೆಟ್ ಪಂದ್ಯವನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ.ನಿಗದಿತ ವೇಳಾಪಟ್ಟಿಯಂತೆ ಈ ಪಂದ್ಯ ಡಿಸೆಂಬರ್ 27 ರಂದು ನಡೆಯಬೇಕಿತ್ತು. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಕೋರಿಕೆಯಂತೆ ಇದೀಗ ಪಂದ್ಯವನ್ನು ಡಿ. 28 ರಂದು ನಡೆಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ನಿರ್ಧರಿಸಿದೆ.ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಐದನೇ ಪುಣ್ಯತಿಥಿ ಡಿ. 27 ರಂದು ನಡೆಯಲಿದೆ. ಈ ಕಾರಣ ಪಂದ್ಯವನ್ನು ಮುಂದೂಡುವಂತೆ ಪಾಕ್ ಮಂಡಳಿಯು ಬಿಸಿಸಿಐನಲ್ಲಿ ಕೇಳಿಕೊಂಡಿತ್ತು.ಪಾಕಿಸ್ತಾನ ಎರಡು ಟ್ವೆಂಟಿ-20 ಹಾಗೂ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯನ್ನಾಡಲು ಭಾರತಕ್ಕೆ ಆಗಮಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry