ಶನಿವಾರ, ನವೆಂಬರ್ 23, 2019
18 °C

ಭಾರತ- ಪಾಕ್ ಕ್ರಿಕೆಟ್ ಪಂದ್ಯ: ಅರ್ಧ ಗಂಟೆಯಲ್ಲೇ ಟಿಕೆಟ್ ಖಾಲಿ...

Published:
Updated:

ದುಬೈ (ಪಿಟಿಐ): ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಜೂನ್15ರಂದು ಭಾರತ-ಪಾಕಿಸ್ತಾನ ನಡುವೆ ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆಯುವ ಪಂದ್ಯದ ಟಿಕೆಟ್‌ಗಳು ಕೆಲವೇ ನಿಮಿಷಗಳಲ್ಲಿ ಮಾರಾಟವಾಗಿವೆ.ಆನ್‌ಲೈನ್‌ನಲ್ಲಿ ಮಾರಾಟ ಪ್ರಕಟಿಸಿ ಕೇವಲ ಅರ್ಧ ಗಂಟೆಯ ಒಳಗೇ ಎಲ್ಲಾ ಟಿಕೆಟ್‌ಗಳೂ ಖರೀದಿಯಾಗಿವೆ ಎಂದು ಟೂರ್ನಿಯ ನಿರ್ದೇಶಕ ಸ್ಟೀವ್ ಎಲ್‌ವರ್ದಿ ಹೇಳಿದರು. ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಟಿಕೆಟ್ ಮಾರಾಟಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಕಂಡು ನಮಗೆ ಅಚ್ಚರಿಯಾಗಿದೆ. ಉಳಿದ ಪಂದ್ಯಗಳ ಟಿಕೆಟ್‌ಗಳೂ ಮಾರಾಟವಾಗಿವೆ' ಎಂದರು.ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಪಂದ್ಯಗಳು ಕಾರ್ಡಿಫ್, ಎಜ್‌ಬಾಸ್ಟನ್ ಮತ್ತು ದಿ ಓವಲ್‌ನಲ್ಲಿ ನಡೆಯಲಿವೆ.

ಪ್ರತಿಕ್ರಿಯಿಸಿ (+)