ಭಾರತ-ಪಾಕ್ ಪಂದ್ಯ: ಟಿಕೆಟ್‌ಗಾಗಿ ನೂಕುನುಗ್ಗಲು

7

ಭಾರತ-ಪಾಕ್ ಪಂದ್ಯ: ಟಿಕೆಟ್‌ಗಾಗಿ ನೂಕುನುಗ್ಗಲು

Published:
Updated:

ಬೆಂಗಳೂರು (ಪಿಟಿಐ): ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಡಿಸೆಂಬರ್ 25 ರಂದು ನಡೆಯುವ ಟ್ವೆಂಟಿ-20 ಪಂದ್ಯದ ಟಿಕೆಟ್‌ಗಾಗಿ ಶುಕ್ರವಾರ ಕ್ರೀಡಾಂಗಣದಲ್ಲಿ ನೂಕುನುಗ್ಗಲು ಉಂಟಾಗಿದೆ.


 

ಶುಕ್ರವಾರ ಬೆಳಿಗ್ಗೆ ಟಿಕೆಟ್‌ನ್ನು ಕೌಂಟರ್‌ನಲ್ಲಿ ಮಾರಾಟ ಮಾಡಲಾಗುತ್ತದೆ ಎಂಬ ಸುದ್ದಿಯನ್ನು ಅರಿತ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಗುರುವಾರ ಮಧ್ಯರಾತ್ರಿಯಿಂದಲೇ ಕಾದು ಕುಳಿತ್ತಿದ್ದರು. ಬೆಳಿಗ್ಗೆ ಟಿಕೆಟ್ ಮಾರಾಟ ಆರಂಭವಾಗುತ್ತಿದ್ದಂತೆ ತಂಡೋಪತಂಡವಾಗಿ ಅಭಿಮಾನಿಗಳ ದಂಡೆ ಕ್ರೀಡಾಂಗಣದ ಬಳಿ ನೆರೆಯಿತು ಎಂದು ಪೊಲೀಸರು ತಿಳಿಸಿದ್ದಾರೆ. 

 

ಕ್ರೀಡಾಂಗಣದ ಸುತ್ತಮುತ್ತ ಬಿಗಿ ಪೊಲೀಸರ್ ಬಂದೋಬಸ್ತ್ ಮಾಡಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. 

 

ಗ್ಯಾಲರಿಯಲ್ಲಿ 5 ಸಾವಿರ ಜನ ಕುಳಿತು ಪಂದ್ಯ ವೀಕ್ಷಿಸಬಹುದಾಗಿದೆ. ಈ ಟಿಕೆಟ್ ಬೆಲೆ 250 ರೂ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry