ಭಾನುವಾರ, ಮೇ 16, 2021
22 °C

ಭಾರತ-ಪಾಕ್ ವ್ಯಾಪಾರ ವೃದ್ಧಿ ನಿರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ಅಟ್ಟಾರಿ- ವಾಘಾ ಗಡಿ ಮಾರ್ಗ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದು ಮತ್ತು ಭಾರತಕ್ಕೆ `ಪರಮಾಪ್ತ ದೇಶ~ದ ಸ್ಥಾನಮಾನ ನೀಡುವ ಸೂಚನೆಯನ್ನು ಪಾಕಿಸ್ತಾನ ನೀಡಿರುವುದರಿಂದ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಮುಂದಿನ ಎರಡು ವರ್ಷಗಳಲ್ಲಿ 800 ಕೋಟಿ ಡಾಲರ್(41176 ಕೋಟಿ ರೂಪಾಯಿ)ಗೆ ಏರಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ `ಅಸೋಚಾಂ~ ಅಂದಾಜು ಮಾಡಿದೆ. ಸದ್ಯ ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ವ್ಯಾಪಾರ ವಹಿವಾಟು 260 ಕೋಟಿ ಡಾಲರ್(13382 ಕೋಟಿ ರೂಪಾಯಿ)ಗಳಷ್ಟಿದೆ. `ಡಬ್ಲ್ಯುಟಿಒ~ ನಿಯಮಾನುಸಾರ  ಈ ವರ್ಷಾಂತ್ಯಕ್ಕೆ ಭಾರತದಿಂದ ಆಮದಾಗುವ 1,209 ಸರಕುಗಳನ್ನು ಋಣಾತ್ಮಕ ಪಟ್ಟಿಯಿಂದ ಕೈಬಿಡಲು ಪಾಕಿಸ್ತಾನ ನಿರ್ಧರಿಸಿದೆ. ಇದು ಅತ್ಯಂತ ಸ್ವಾಗತಾರ್ಹ ಬೆಳವಣಿಗೆ. ಇದರಿಂದ ಉಭಯ ದೇಶಗಳ ನಡುವಿನ ವ್ಯಾಪಾರ ವಹಿವಾಟು ಚೇತರಿಸಿಕೊಳ್ಳಲಿದೆ ಎಂದು `ಅಸೋಚಾಂ~ ಹರ್ಷ ವ್ಯಕ್ತಪಡಿಸಿದೆ. ನಿರ್ಬಂಧ ಸಡಿಲಿಸಿದ ನಂತರ, ಭಾರತದಿಂದ 6 ಸಾವಿರಕ್ಕೂ ಹೆಚ್ಚಿನ ಸರಕುಗಳು ಪಾಕಿಸ್ತಾನಕ್ಕೆ ರಫ್ತಾಗುತ್ತವೆ. ಮೊದಲು 2 ಸಾವಿರ ಸರಕುಗಳಿಗೆ  ಮಾತ್ರ ರಫ್ತು ಅವಕಾಶ ಇದ್ದಿತು. ಈಗ ವಾಘಾ ಗಡಿ ಮೂಲಕ ಪ್ರತಿ ದಿನ 600 ಟ್ರಕ್‌ಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಉಭಯ ದೇಶಗಳ ನಡುವೆ ಸಂಚರಿಸುವ ಉದ್ಯಮಿಗಳಿಗೆ ವಾಣಿಜ್ಯ ಪ್ರವಾಸ ವೀಸಾ ಮೇಲಿನ ನಿರ್ಬಂಧವನ್ನೂ ಸಡಿಲಿಸಲಾಗಿದೆ.ಏಪ್ರಿಲ್ 8ರಂದು ಪ್ರಧಾನಿ ಮನಮೋಹನ್ ಸಿಂಗ್, ಪಾಕ್ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ನಡುವೆ ನಡೆದ ಮಾತುಕತೆಯಲ್ಲಿ ಈ ಒಪ್ಪಂದಕ್ಕೆ ಬರಲಾಗಿದೆ. ಭಾರತವು 1996ರಲ್ಲೇ ಪಾಕಿಸ್ತಾನಕ್ಕೆ `ಪರಮಾಪ್ತ ದೇಶ~ದ ಸ್ಥಾನಮಾನ ನೀಡಿದೆ. ಆದರೆ, ಪಾಕಿಸ್ತಾನ ಮಾತ್ರ ಭಾರತಕ್ಕೆ ಈ ಸ್ಥಾನಮಾನ ನೀಡುವ ವಿಚಾರದಲ್ಲಿ ಲೆಕ್ಕಾಚಾರದಲ್ಲಿಯೇ ಮುಳುಗಿದೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.