ಭಾರತ ಪುಟಿದೆದ್ದು ನಿಲ್ಲಲಿದೆ: ಸಚಿನ್

7

ಭಾರತ ಪುಟಿದೆದ್ದು ನಿಲ್ಲಲಿದೆ: ಸಚಿನ್

Published:
Updated:
ಭಾರತ ಪುಟಿದೆದ್ದು ನಿಲ್ಲಲಿದೆ: ಸಚಿನ್

ಮಸ್ಸೂರಿ (ಪಿಟಿಐ): ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ಭಾರತ ತಂಡ ಪುಟಿದೆದ್ದು ನಿಲ್ಲಲಿದೆ ಎಂಬ ವಿಶ್ವಾಸವನ್ನು ಸಚಿನ್ ತೆಂಡೂಲ್ಕರ್ ವ್ಯಕ್ತಪಡಿಸಿದ್ದಾರೆ.ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಇದೇ ಮೊದಲ ಬಾರಿ ಮಾಧ್ಯಮದ ಜೊತೆ ಮಾತನಾಡಿದ ಸಚಿನ್, `ನಾನು ಇದೀಗ ಏಕದಿನ ತಂಡದ ಭಾಗವಾಗಿ ಉಳಿದಿಲ್ಲ. ಆದರೆ ನನ್ನ ಮನಸ್ಸು ಸದಾ ತಂಡದ ಜೊತೆಗೆ ಇರಲಿದೆ' ಎಂದಿದ್ದಾರೆ.

`ಎಲ್ಲ ರೀತಿಯಲ್ಲೂ ತಂಡವನ್ನು ಬೆಂಬಲಿಸುವೆ. ಈಗ ನಡೆಯುತ್ತಿರುವ ಸರಣಿಯಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗ ಪುಟಿದೆದ್ದು ನಿಲ್ಲುವುದು ಖಚಿತ' ಎಂದು ಹೇಳಿದ್ದಾರೆ.`ತಂಡಕ್ಕೆ ಇದೀಗ ಎಲ್ಲರ ಬೆಂಬಲದ ಅಗತ್ಯವಿದೆ. ಎಲ್ಲರಿಂದ ಪ್ರೋತ್ಸಾಹ ದೊರೆತರೆ ಆಟಗಾರರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯ' ಎಂದ ಸಚಿನ್, `ಇದೀಗ 2013ಕ್ಕೆ ಬಂದಿದ್ದೇವೆ. ದೇಶದ ಜನತೆಗೆ ಹೊಸ ವರ್ಷದ ಶುಭಾಶಯಗಳು' ಎಂದು ನುಡಿದರು.ಕಳೆದ ಕೆಲ ದಿನಗಳಿಂದ ಕುಟುಂಬ ಸದಸ್ಯರ ಜೊತೆ ಮಸ್ಸೂರಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಚಿನ್, ವೃತ್ತಿಜೀವನದ ಉದ್ದಕ್ಕೂ ತನ್ನ ಬೆಂಬಲಕ್ಕೆ ನಿಂತ ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.`23 ವರ್ಷಗಳ ಕ್ರಿಕೆಟ್ ಜೀವನ ಅದ್ಭುತವಾದುದು. ನನಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆಗಳು. ವೃತ್ತಿಜೀವನದಲ್ಲಿ ಯಶಸ್ಸು ಹಾಗೂ ಕಷ್ಟಗಳನ್ನು ಕಂಡಿದ್ದೇವೆ. ಆದರೆ ಅಭಿಮಾನಿಗಳು ಎಲ್ಲ ಸಂದರ್ಭಗಳಲ್ಲೂ ನನಗೆ ಬೆಂಬಲ ನೀಡಿದ್ದಾರೆ. ಆದ್ದರಿಂದ ಈ ಪಯಣವನ್ನು ಮರೆಯಲು ಸಾಧ್ಯವಿಲ್ಲ' ಎಂದರು.ಮಸ್ಸೂರಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಬಗ್ಗೆ ಕೇಳಿದಾಗ, `ನಿಬಿಡ ಕ್ರಿಕೆಟ್‌ನಿಂದಾಗಿ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯಲು ಹೆಚ್ಚಿನ ಸಮಯ ಸಿಕ್ಕಿರಲಿಲ್ಲ. ಇದೀಗ ಕ್ರಿಕೆಟ್‌ನಿಂದ ಬಿಡುವು ಲಭಿಸಿದ ಕಾರಣ ಇಲ್ಲಿಗೆ ಆಗಮಿಸಿದ್ದೇನೆ' ಎಂದರು.

`ಇಲ್ಲಿ ಬ್ಯಾಡ್ಮಿಂಟನ್, ಟೇಬಲ್ ಟೆನಿಸ್ ಹಾಗೂ ಟೆನಿಸ್ ಬಾಲ್ ಕ್ರಿಕೆಟ್ ಆಡಿ ಸಂತಸಪಟ್ಟೆ' ಎಂದು ತಿಳಿಸಿದರು.ಸಚಿನ್ ಅವರು ಪತ್ನಿ ಅಂಜಲಿ ಹಾಗೂ ಮಕ್ಕಳಾದ ಸಾರಾ ಮತ್ತು ಅರ್ಜುನ್ ಜೊತೆ ಡಿಸೆಂಬರ್ 23 ರಿಂದ ಮಸ್ಸೂರಿಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry