ಭಾರತ ಬಾಂಧವ್ಯಕ್ಕೆ ಆದ್ಯತೆ

7

ಭಾರತ ಬಾಂಧವ್ಯಕ್ಕೆ ಆದ್ಯತೆ

Published:
Updated:
ಭಾರತ ಬಾಂಧವ್ಯಕ್ಕೆ ಆದ್ಯತೆ

ವಾಷಿಂಗ್ಟನ್ (ಐಎಎನ್‌ಎಸ್): ಮುಂದಿನ ಅವಧಿಗೂ ಅಧ್ಯಕ್ಷರಾಗಿ ಮುಂದುವರಿದರೆ ಜಾಗತಿಕವಾಗಿ ಬಲಾಢ್ಯ ರಾಷ್ಟ್ರಗಳಾಗುತ್ತಿರುವ ಭಾರತ, ಚೀನಾ, ಬ್ರಿಜಿಲ್‌ಗಳ ಜೊತೆ ಹೊಂದಿರುವ ಉತ್ತಮ ಬಾಂಧವ್ಯವನ್ನು ಮುಂದುವರಿಸಲು ವಿದೇಶಾಂಗ ನೀತಿಯಲ್ಲಿ ಆದ್ಯತೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

2012ರಲ್ಲಿ ನಡೆಯುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಉಮೇದುವಾರಿಕೆ ಮಾಡಲು ಬಯಸಿರುವ ಒಬಾಮ ಈಗಲೇ ತಮ್ಮ ಆಶೋತ್ತರಗಳನ್ನು ಪ್ರಕಟಿಸಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ.

ಆದರೆ ಒಬಮಾ ಅವರ ಪತ್ರಿಕಾ ಕಾರ್ಯದರ್ಶಿ ಜಾಯ್ ಕಾರ್ನೆ,  ಇದನ್ನು ತಳ್ಳಿಹಾಕಿದ್ದು, ‘ಒಬಾಮ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿಯುವುದಕ್ಕೂ ಅಮೆರಿಕದ ವಿದೇಶಾಂಗ ನೀತಿಗೂ ಸಂಬಂಧವಿಲ್ಲ. ಚೀನಾ, ಭಾರತ ಮತ್ತು ಬ್ರಿಜಿಲ್‌ಗಳ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ವಿದೇಶಾಂಗ ನೀತಿಯಲ್ಲಿ ಬದಲಾವಣೆ ತರುವ ಅಗತ್ಯವಿದೆ. ಆದರೆ ಜಾಗತಿಕವಾಗಿ ಒಂದೆರಡು ಭಾಗಗಳನ್ನು ಮಾತ್ರ ಪರಿಗಣಿಸಿ ಅಲ್ಲ’ ಎಂದು ಅವರು ಸೋಮವಾರ ಸುದ್ದಿಗಾರರಿಗೆ ಸ್ಟಷ್ಟಪಡಿಸಿದರು.

ಒಬಾಮ ಅವರು ಎರಡನೇ ಅವಧಿಗೆ ಅಧ್ಯಕ್ಷರಾಗಿ ಮುಂದುವರಿದರೆ ತಾವು ನೀಡುವ ಅದ್ಯತೆಗಳ ಬಗ್ಗೆ ತಮ್ಮ ವೆಬ್‌ಸೈಟನ್‌ಲ್ಲಿ ಹೇಳಿರುವ ಅಂಶಗಳ ಬಗ್ಗೆ ಪತ್ರಕರ್ತರು ಗಮನಸೆಳೆದಾಗ ‘ಅದು ಪ್ರಚಾರದ ಒಂದು ಭಾಗವಷ್ಟೆ’ ಎಂದು ಅವರು ಪ್ರತಿಕ್ರಿಯಿಸಿದರು.

‘ಒಬಾಮ ಅವರು ಅಧ್ಯಕ್ಷರಾಗಿ ಎರಡು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಅವರು ಅನೇಕ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇದರಲ್ಲಿ ವಿದೇಶಾಂಗ ನೀತಿ ಮತ್ತು ಅಮೆರಿಕ ಜಾಗತಿಕವಾಗಿ ವಹಿಸಿರುವ ಮುಂದಾಳತ್ವ ಕೂಡ ಸೇರಿದೆ’ ಎಂದರು.

ಅಧ್ಯಕ್ಷೀಯ ಚುನಾವಣೆಗೆ ಅಧಿಕೃತವಾಗಿ ಉಮೇದುವಾರಿಕೆ ಪತ್ರವನ್ನು ಚುನಾವಣಾ ಆಯೋಗದಕ್ಕೆ ಸಲ್ಲಿಸುವುದಕ್ಕೂ ಮುನ್ನ ಬರಾಕ್ ಒಬಾಮ ಅವರು ತಮ್ಮ ಸ್ನೇಹಿತರು ಮತ್ತು ಬೆಂಬಲಿಗರಿಗೆ ಇ- ಮೇಲ್‌ಗಳನ್ನು ಕಳುಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry