ಬುಧವಾರ, ನವೆಂಬರ್ 13, 2019
28 °C
ಕ್ರಿಕೆಟ್: ಮಿಂಚಿದ ಹರ್ಮನ್ ಪ್ರೀತ್ ಕೌರ್

ಭಾರತ ಮಹಿಳಾ ತಂಡಕ್ಕೆ ಜಯ

Published:
Updated:

ಅಹಮದಾಬಾದ್ (ಪಿಟಿಐ): ಭಾರತ ಮಹಿಳಾ ತಂಡದವರು ಸೋಮವಾರ ಇಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಸಾಧಿಸಿದ್ದಾರೆ.ಮೊಟೇರಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬಾಂಗ್ಲಾ ನೀಡಿದ 195 ರನ್‌ಗಳ ಗುರಿಯನ್ನು ಆತಿಥೇಯರು 49.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ತಲುಪಿದರು.ಹರ್ಮನ್ ಪ್ರೀತ್ ಕೌರ್ (ಔಟಾಗದೆ 63) ಹಾಗೂ ಅನಘಾ ದೇಶಪಾಂಡೆ (47) ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿದರು. ಇವರಿಬ್ಬರು ನಾಲ್ಕನೇ ವಿಕೆಟ್‌ಗೆ 83 ರನ್ ಸೇರಿಸಿದರು.ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಪ್ರವಾಸಿ ಬಾಂಗ್ಲಾದೇಶ ತಂಡದ ಮೇಲೆ ಎಕ್ತಾ ಬಿಸ್ತ್ (27ಕ್ಕೆ3) ಒತ್ತಡ ಹೇರಿದರು. ಇದರ ನಡುವೆಯೂ ಸಲ್ಮಾನ್ ಖಾತುನ್ (ಔಟಾಗದೆ 75) ಮತ್ತು ಲತಾ (39) ಉತ್ತಮ ಪ್ರದರ್ಶನ ತೋರಿದರು. ಹಾಗಾಗಿ ಈ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ಕಳೆದುಕೊಂಡು 194 ರನ್ ಗಳಿಸಲು ಸಾಧ್ಯವಾಯಿತು.ಸಂಕ್ಷಿಪ್ತ ಸ್ಕೋರ್: ಬಾಂಗ್ಲಾದೇಶ: 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 194 (ರುಮನಾ ಅಹ್ಮದ್ 38, ಲತಾ ಮೊಂಡಲ್ 39, ಸಲ್ಮಾನ್ ಖಾತುನ್ ಔಟಾಗದೆ 75; ಶುಭಲಕ್ಷ್ಮಿ  ಶರ್ಮ 28ಕ್ಕೆ2, ಎಕ್ತಾ ಬಿಸ್ತ್ 27ಕ್ಕೆ3);ಭಾರತ: 49.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 196 (ತಿರುಷ್ ಕಾಮಿನಿ 23, ಮೊನಾ ಮೆಶ್ರಾಮ್ 22, ಹರ್ಮನ್‌ಪ್ರೀತ್ ಕೌರ್ ಔಟಾಗದೆ 63, ಅನಘಾ ದೇಶಪಾಂಡೆ 47; ಜಹಾನಾರ ಕೌರ್ 31ಕ್ಕೆ2):ಫಲಿತಾಂಶ: ಭಾರತಕ್ಕೆ 5 ವಿಕೆಟ್ ಜಯ ಹಾಗೂ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ.

ಪ್ರತಿಕ್ರಿಯಿಸಿ (+)