ಭಾರತ ಮಾತಾ ಶಾಲೆಗೆ ಪ್ರಶಸ್ತಿ

7

ಭಾರತ ಮಾತಾ ಶಾಲೆಗೆ ಪ್ರಶಸ್ತಿ

Published:
Updated:

ಬೆಂಗಳೂರು: ಭಾರತ ಮಾತಾ ಹೈಸ್ಕೂಲು ತಂಡದವರು ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಈಚೆಗೆ ನಡೆದ ಬೆಂಗಳೂರು ದಕ್ಷಿಣ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕಿಯರ ಬಾಲ್‌ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ಕೊಂಡರು.ಶಂಕರಪುರಮ್‌ನ ಉದಯಭಾನು ಮೈದಾನದಲ್ಲಿ ನಡೆದ ಟೂರ್ನಿಯ ಅಂತಿಮ ಪಂದ್ಯದಲ್ಲಿ ಭಾರತ ಮಾತಾ ತಂಡದವರು 29-–10, 29-–07ರಿಂದ ಜೆ.ಪಿ.ನಗರದ ಇಂದಿರಾ ಪ್ರಿಯದರ್ಶಿನಿ ಶಾಲಾ ತಂಡವನ್ನು ಸೋಲಿಸಿದರು.ಭಾರತ ಮಾತಾ ಶಾಲೆಯು ಈ ಪ್ರಶಸ್ತಿಯನ್ನು  ಸತತ 21ನೇ ವರ್ಷ ಗೆದ್ದಿರುವುದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry