ಭಾರತ ಮೂಲದ ಐಎಸ್ ಉಗ್ರ ಸಿರಿಯಾದಲ್ಲಿ ಸಾವು?

ಮೆಲ್ಬರ್ನ್(ಪಿಟಿಐ): ಉಗ್ರರ ದಾಳಿ ಸಂಬಂದ ಆಸ್ಟ್ರೇಲಿಯಾಕ್ಕೆ ಬೇಕಿದ್ದ ಐಎಸ್ ಸಂಘಟನಾ ಚಟುವಟಿಕೆಯಲ್ಲಿ ತೊಡಗಿದ್ದ ಭಾರತ ಮೂಲದ ಫಿಜಿಯ ಉಗ್ರನೊಬ್ಬ ಸಿರಿಯಾದಲ್ಲಿ ಹತ್ಯೆಯಾಗಿದ್ದಾನೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.
ನೀಲ್ ಪ್ರಕಾಶ್ ಮೃತಪಟ್ಟಿದ್ದಾನೆ ಎಂದು ಮೆಲ್ಬರ್ನ್ ಮೂಲದ ತೀವ್ರಗಾಮಿ ಸದಸ್ಯರೊಬ್ಬರು ಗುಪ್ತ ಸಂವಹನ ಮಾಧ್ಯಮ ಟೆಲಿಗ್ರಾಂ ಮೂಲಕ ತಿಳಿಸಿದ್ದಾರೆ.
‘ಅಬು ಖಲೀದಾ ಅಲ್–ಕಾಂಬೊಡಿ ಎಂದು ಕರೆಯಲಾಗುತ್ತಿದ್ದ ಹೋರಾಟಗಾರ ಪ್ರಕಾಶ್ ‘ಹುತಾತ್ಮ’ನಾಗಿದ್ದಾನೆ’ ಎಂದಷ್ಟೇ ಐಎಸ್ ಹೇಳಿಕೊಂಡಿದೆ. ಆದರೆ, ಆತ ಎಲ್ಲಿ, ಹೇಗೆ ಹತ್ಯೆಯಾದ ಎಂಬ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಹೆರಾಲ್ಡ್ ಸನ್ ವರದಿ ಮಾಡಿದೆ.
ಆಸ್ಟ್ರೇಲಿಯಾದ ರಾಷ್ಟ್ರೀಯ ದಿನಾಚರಣೆ ವೇಳೆ ನಡೆದ ದಾಳಿಯಲ್ಲಿ ಪ್ರಕಾಶ್ ಐಎಸ್ ಉಗ್ರರ ಜತೆ ಸಂಪರ್ಕದಲ್ಲಿದ್ದ. ಈತನ ಬಂಧನಕ್ಕೆ ಆಸ್ಟ್ರೇಲಿಯಾ ಸರ್ಕಾರ ಆದೇಶ ಹೊರಡಿಸಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.