ಭಾರತ ಮೂಲದ ಕುಲಕರ್ಣಿ ನೇಮಕ

7

ಭಾರತ ಮೂಲದ ಕುಲಕರ್ಣಿ ನೇಮಕ

Published:
Updated:
ಭಾರತ ಮೂಲದ ಕುಲಕರ್ಣಿ ನೇಮಕ

ಲಾಸ್ ಏಂಜಲಿಸ್ (ಪಿಟಿಐ): ಭಾರತ ಮೂಲದ ಅಮೆರಿಕ ಪ್ರಜೆ ಸುನಿಲ್ ಆರ್. ಕುಲಕರ್ಣಿ ಅವರನ್ನು ಉತ್ತರ ಕ್ಯಾಲಿಫೋರ್ನಿಯಾ ರಾಜ್ಯದ ಉನ್ನತ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಗಿದೆ.41 ವರ್ಷದ ಕುಲಕರ್ಣಿ ಅವರು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವ್ಯಾಜ್ಯ ವಿಭಾಗದಲ್ಲಿ ಹಿರಿಯ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರನ್ನು ಗೌರ‌್ನರ್ ಜೆರಿ ಬ್ರೌನ್ ಅವರು ಸಾಂತಾ ಕ್ಲಾರಾ ಕೌಂಟಿ ಉನ್ನತ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ಕುಲಕರ್ಣಿ ಹುಟ್ಟಿದ್ದು ಲಾಸ್ ಏಂಜಲೀಸ್‌ನಲ್ಲಿ. ಈಗ ಕ್ಯಾಲಿಫೋರ್ನಿಯಾದ ಪಾಲೊ ಆಲ್ಟೊದಲ್ಲಿ ವಾಸವಾಗಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry