ಶುಕ್ರವಾರ, ಜೂನ್ 18, 2021
28 °C

ಭಾರತ ಮೂಲದ ತರುಣನಿಗೆ ಅಮೆರಿಕದ ಪ್ರತಿಷ್ಠಿತ ವಿಜ್ಞಾನ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಭಾರತೀಯ ಮೂಲದ ಅಮೆರಿಕನ್ ತರುಣ ನಿತಿನ್ ರೆಡ್ಡಿ ಟಿ ಅವರು ಸ್ತನ ಕ್ಯಾನ್ಸರ್ ಚಿಕಿತ್ಸೆಗೆ  ಕಡಿಮೆ ನಂಜಿನ ಹಾಗೂ ಪರಿಣಾಮಕಾರಿಯಾದ ವಿಧಾನವನ್ನು ಸಂಶೋಧಿಸಿದ್ದಕ್ಕಾಗಿ ಅಮೆರಿಕದ ಪ್ರತಿಷ್ಠಿತ ವಿಜ್ಞಾನ ಪ್ರತಿಭಾ ಸ್ಪರ್ಧೆಯಲ್ಲಿ ವಿಜೇತರಾಗಿದ್ದು 1 ಲಕ್ಷ ಅಮೆರಿಕನ್ ಡಾಲರ್ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.ಇಂಟೆಲ್ ಪ್ರತಿಭಾ ಶೋಧ ಸ್ಪರ್ಧೆಯಲ್ಲಿ ನಿತಿನ್ ರೆಡ್ಡಿ ಅವರು ಪ್ರಥಮ ಸ್ಥಾನ ಗಳಿಸಿದ್ದರೆ ಭಾರತೀಯ ಮೂಲದ ಇನ್ನಿಬ್ಬರು ಅಮೆರಿಕನ್ ತರುಣರಾದ ಫ್ಲಾರಿಡಾದ ನೀಲ್ ಪಟೇಲ್ ಮತ್ತು ಇಂಡಿಯಾನಾದ ಅನಿರುದ್ಧ ಪ್ರಭು ಮೊದಲ 10 ಮಂದಿಯ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.ಅಮೆರಿಕದ ರಾಷ್ಟ್ರೀಯ ವಿಜ್ಞಾನ ಪ್ರತಿಭಾ ಶೋಧದ ಅಂತಿಮ ಸ್ಪರ್ಧೆಯಲ್ಲಿ 40 ಮಂದಿಯ ನಡುವೆ ಪೈಪೋಟಿ ಇತ್ತು. ಈ 40 ಮಂದಿಯ ಪೈಕಿ ಏಳು ಮಂದಿ ಭಾರತೀಯ ಮೂಲದ ಅಮೆರಿಕನ್ ತರುಣರಾಗಿದ್ದರು.17ರ ಹರೆಯದ ನಿತಿನ್ ರೆಡ್ಡಿ ಮಿಚಿಗನ್ ನಿವಾಸಿಯಾಗಿದ್ದು ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿದ ತಮ್ಮ ಸಂಶೋಧನೆಗಾಗಿ ಇಂಟೆಲ್ ಪ್ರತಿಷ್ಠಾನದ ಅತ್ಯುನ್ನತ ಬಹುಮಾನವನ್ನು ತಮ್ಮ ಬಗಲಿಗೆ ಏರಿಸಿಕೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.