ಸೋಮವಾರ, ನವೆಂಬರ್ 18, 2019
20 °C

ಭಾರತ ಮೂಲದ ಮಗುವಿನ ಜೀವ ಉಳಿಸಬಹುದಿತ್ತು: ತಜ್ಞರ ಹೇಳಿಕೆ

Published:
Updated:

ಲಂಡನ್ (ಪಿಟಿಐ): ಶೆಫೀಲ್ಡ್‌ನ ಆಸ್ಪತ್ರೆಯೊಂದರಲ್ಲಿ ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟ ಭಾರತ ಮೂಲದ ಮಗುವನ್ನು ಬೇರೆ  ಆಸ್ಪತ್ರೆಗೆ ಸೇರಿಸಿದ್ದರೆ ಬದುಕಿಸಬಹುದಿತ್ತು ಎಂದು ವೈದ್ಯರೊಬ್ಬರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಭಾರತ ಮೂಲದ ಎರಡು ವರ್ಷದ ತರುಣ್ ಉಮಾಶಂಕರ್ ಎಂಬ ಮಗುವಿನ ಸಾವಿನ ಪ್ರಕರಣದ ಅಂತಿಮ ವಿಚಾರಣೆ ಸಂದರ್ಭದಲ್ಲಿ  ತಜ್ಞ ವೈದ್ಯ ಡಾ. ಡೇವಿಡ್ ಕ್ರಾಬ್ ಅವರು ನ್ಯಾಯಾಲಯಕ್ಕೆ ಈ ರೀತಿ ಹೇಳಿದ್ದಾರೆ.ತೀವ್ರ ರಕ್ತಸ್ರಾವದ ಕಾರಣದಿಂದ ತರುಣ್‌ನನ್ನು 2010ರ ಜುಲೈ 10ರಂದು ಬಾರ್ನ್‌ಸ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಶೆಫೀಲ್ಡ್‌ನ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅದೇ ದಿನ ತರುಣ್ ಕೊನೆಯುಸಿರೆಳೆದಿದ್ದ. ಮಗುವಿನ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಲಾಗಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಶೆಫೀಲ್ಡ್‌ನ ವೈದ್ಯಕೀಯ ಕಾನೂನು ಕೇಂದ್ರದಲ್ಲಿ ಮಾರ್ಚ್‌ನಲ್ಲಿ ಎಂಟು ದಿನಗಳ ವಿಚಾರಣೆ ನಡೆದಿತ್ತು.

ಪ್ರತಿಕ್ರಿಯಿಸಿ (+)