ಶುಕ್ರವಾರ, ಜನವರಿ 24, 2020
22 °C

ಭಾರತ ಮೂಲದ ಮಹಿಳೆ ಅನುಮಾನಾಸ್ಪದ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್‌ (ಪಿಟಿಐ): ಭಾರತ ಮೂಲದ ಮಹಿಳೆಯೊಬ್ಬರು ತೀವ್ರ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪರ್ವಿಂದರ್‌ ಕೌರ್‌ (೩೧) ಮೃತಪಟ್ಟಿದ್ದು, ಸೋಮವಾರ ನಡೆದ ಈ ಘಟನೆಯಲ್ಲಿ ಅವರು ಶೇ ೮೫ರಷ್ಟು ಸುಟ್ಟ ಗಾಯಗಳಿಂದ ನರಳಿದ್ದು, ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ.ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಕಳೆದ ವರ್ಷ ಪತಿ ಕುಲ್ವಿಂದರ್‌ ಸಿಂಗ್‌ ಜತೆ ಕೌರ್‌ ಜಗಳ­ವಾಡಿದ್ದರು. ನಂತರ ಶಾಂತಿಯುತವಾಗಿ ಸಮಸ್ಯೆಯನ್ನು ಬಗೆಹರಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)