ಮಂಗಳವಾರ, ನವೆಂಬರ್ 12, 2019
27 °C

ಭಾರತ ಮೂಲದ ಮಹಿಳೆ ನಿಗೂಢ ಸಾವು

Published:
Updated:

ಲಂಡನ್ (ಪಿಟಿಐ): ಭಾರತೀಯ ಮೂಲದ ಮಹಿಳೆ ಹಾಗೂ ಆಕೆಯ ಇಬ್ಬರು ಮಕ್ಕಳು ವಾಯವ್ಯ ಲಂಡನ್‌ನ ತಮ್ಮ ನಿವಾಸದಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದಾರೆ.

ಹೀನಾ ಸೋಲಂಕಿ (34), ಮಕ್ಕಳಾದ ಜಾಸ್ಮಿನ್ (9) ಮತ್ತು ಪ್ರಿಶ್ (4) ಅವರು ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಗುಜರಾತ್‌ನಲ್ಲಿ ಪದವಿ ವ್ಯಾಸಂಗ ಮಾಡಿರುವ ಹೀನಾ ಅವರು ಮಾಧ್ಯಮಿಕ ಶಾಲೆಯೊಂದರಲ್ಲಿ ಪ್ರಯೋಗಾಲಯದ ತಂತ್ರಜ್ಞೆಯಾಗಿ ಕೆಲಸ ಮಾಡುತ್ತಿದ್ದರು. ಹೀನಾ ಅವರು ಮಕ್ಕಳಿಗೆ ರಾಸಾಯನಿಕ ವಿಷ ಪ್ರಾಶನ ಮಾಡಿಸಿ, ನಂತರ ತಾವೂ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು, ಅನಿಲ ಸೋರಿಕೆಯಿಂದ ಹೀಗಾಗಿರಬಹುದು ಎಂದು ಶಂಕಿಸಿದ್ದಾರೆ.

ಪ್ರತಿಕ್ರಿಯಿಸಿ (+)