ಭಾರತ ಮೂಲದ ವಿಜ್ಞಾನಿಗೆ ಧನ ಸಹಾಯ

7

ಭಾರತ ಮೂಲದ ವಿಜ್ಞಾನಿಗೆ ಧನ ಸಹಾಯ

Published:
Updated:

ಹ್ಯೂಸ್ಟನ್‌ (ಪಿಟಿಐ): ಮಿದುಳಿನ ಕಾರ್ಯನಿರ್ವಹಣೆ ಬಗ್ಗೆ ಸಂಶೋಧನೆ ನಡೆಸುವುದಕ್ಕಾಗಿ ಭಾರತ ಮೂಲದ ನರ­ವಿಜ್ಞಾನಿ ಖಲೀಲ್‌ ರಜಾಕ್‌ ಅವರಿಗೆ  8,66,902 ಡಾಲರ್‌ (ಸುಮಾರು ₨5.38 ಕೋಟಿ) ಧನ ಸಹಾಯ ದೊರೆತಿದೆ.ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು (ಎನ್‌ಎಸ್‌ಎಫ್‌) ತನ್ನ ‘ಪ್ರಾಧ್ಯಾಪಕ ನೈಪುಣ್ಯ ಅಭಿವೃದ್ಧಿ ಕಾರ್ಯಕ್ರಮ’ದ ಅಡಿಯಲ್ಲಿ ರಜಾಕ್‌ ಅವರು ಮಾಡು­ತ್ತಿರುವ ಸಂಶೋಧನೆಗೆ ಐದು ವರ್ಷಗಳ ಅವಧಿಗೆ ಈ ಸಹಾಯ ಧನ ನೀಡಲಿದೆ.ಚೆನ್ನೈ ಮೂಲದ ಖಲೀಲ್‌ ರಜಾಕ್‌ ಅವರು ಕ್ಯಾಲಿ­ಫೋರ್ನಿಯಾ ರಿವರ್‌­ಸೈಡ್‌ ವಿಶ್ವವಿದ್ಯಾಲಯದ ಮನೋ­ವಿಜ್ಞಾನ ಮತ್ತು ನರವಿಜ್ಞಾನ ವಿಭಾಗ­ದಲ್ಲಿ ಸಹಾಯಕ ಪ್ರಾಧ್ಯಾಪ­ಕ­ರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry