ಭಾರತ ಮೈತ್ರಿಯ ನಾಡು

7

ಭಾರತ ಮೈತ್ರಿಯ ನಾಡು

Published:
Updated:

ಭಾರತೀಯ ವಿದ್ಯಾಭವನ: ಶನಿವಾರ ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರ ಸಮ್ಮುಖದಲ್ಲಿ ಅವರೇ ಬರೆದಿರುವ A Fellowship of faiths’ ಕೃತಿಯ ಕನ್ನಡ ಅವತರಣಿಕೆ ‘ಭಾರತ ಮೈತ್ರಿಯ ನಾಡು’ (ಅನುವಾದ: ಎಚ್.ವಿ.ನಾಗರಾಜ ರಾವ್) ಲೋಕಾರ್ಪಣೆ.ಭಾರತೀಯ ಸಂಸ್ಕೃತಿಯನ್ನು ಎಲ್ಲರಿಗೂ ಅರ್ಥವಾಗುವಂತೆ ಬರೆದಿರುವ ಈ ಪುಸ್ತಕ ಓದುಗರ ಮೆಚ್ಚುಗೆ ಪಡೆದಿತ್ತು. ಅದನ್ನು ಕನ್ನಡಕ್ಕೆ ಅನುವಾದಿಸಿ ಕನ್ನಡಿಗರಿಗೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಭಾರತೀಯ ಪರಂಪರೆಯ ಮುಖ್ಯ ವಾಹಿನಿಯ ಎಲ್ಲ ಧರ್ಮಗಳ ಕೂಲಂಕಷ ಅಧ್ಯಯನ ಇದರಲ್ಲಿದೆ. ಅತಿಥಿಗಳು: ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಐಐಎಂ ಮಾಜಿ ನಿರ್ದೇಶಕ ಪ್ರೊ. ಎನ್.ಎಸ್. ರಾಮಸ್ವಾಮಿ. ಸ್ಥಳ: ಭಾರತೀಯ ವಿದ್ಯಾಭವನ, ರೇಸ್ ಕೋರ್ಸ್ ರಸ್ತೆ. ಸಂಜೆ 5.45.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry