ಮಂಗಳವಾರ, ಜನವರಿ 21, 2020
19 °C

ಭಾರತ ಶುಭಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):ಪ್ರಭಾವಿ ಪ್ರದರ್ಶನ ತೋರಿದ ಭಾರತ ಮಹಿಳಾ ಹಾಕಿ ತಂಡದವರು ಇಲ್ಲಿ ಆರಂಭವಾದ ನಾಲ್ಕು ಪಂದ್ಯಗಳನ್ನೊಳಗೊಂಡ ಹಾಕಿ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದರು.ಇಲ್ಲಿನ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಭಾರತ 3-0ಗೋಲುಗಳಿಂದ ಅಜರ್‌ಬೈಜಾನ್ ತಂಡವನ್ನು ಮಣಿಸಿತು.ಆರಂಭದಿಂದಲೂ ಆತಿಥೇಯ ರಾಷ್ಟ್ರದವರು ತೋರಿದ ಮಿಂಚಿನ ಹೋರಾಟದಿಂದ ಈ ಗೆಲುವು ಸಾಧ್ಯವಾಯಿತು. ಅನುರಾಧಾ ದೇವಿ 19ನೇ ನಿಮಿಷದಲ್ಲಿ ಗೋಲಿನ ಖಾತೆ ತೆರೆದರು. ಸುಂದರಾ 51ನೇ ನಿಮಿಷದಲ್ಲಿ ಗೋಲು ತಂದಿಟ್ಟರೆ, ಜೈಯ್‌ದೀಪ್ ಕೌರ್ 61ನೇ ನಿಮಿಷದಲ್ಲಿ ಮೂರನೇ ಗೋಲು ಗಳಿಸಿ ಗೆಲುವಿನ ಅಂತರ ಹೆಚ್ಚಿಸಿದರು.

ಪ್ರತಿಕ್ರಿಯಿಸಿ (+)