ಶುಕ್ರವಾರ, ಏಪ್ರಿಲ್ 23, 2021
22 °C

ಭಾರತ- ಶ್ರೀಲಂಕಾ ಸಾಂಸ್ಕೃತಿಕ ಬೆಸುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ನಗರದ ಗಾಂಧಿ ಭವನ ಭಾನುವಾರ ಭಾರತ ಮತ್ತು ಶ್ರೀಲಂಕಾ ದೇಶಗಳ ಸಾಂಸ್ಕೃತಿಕ ಬಾಂಧವ್ಯದ ಬೆಸುಗೆಗೆ ವೇದಿಕೆಯಾಯಿತು. ಶ್ರೀಲಂಕಾದ ಗುಡ್ಡ ಪ್ರದೇಶ ನವತಾಲ್‌ನಿಂದ ಆಗಮಿಸಿದ್ದ ಸುಮಾರು 20 ಮಂದಿ ನೃತ್ಯ ಪಟುಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿ ಸಭಿಕರ ಮನಗೆದ್ದರು.ಭಾರತ ಮತ್ತು ಶ್ರೀಲಂಕಾ ನಡುವೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಭಾಗವಾಗಿ ಈ ಕಲಾವಿದರು ಮಂಡ್ಯಕ್ಕೆ ಭೇಟಿ ನೀಡಿದ್ದರು. ನವತಾಲ್ ಪ್ರದೇಶದ ಕುಸುಂ ಡ್ಯಾನ್ಸಿಂಗ್ ಶಾಲೆಗೆ ಸೇರಿದ 20 ಕಲಾವಿದೆಯರು, ಆರು ಮಂದಿ ಶಿಕ್ಷಕರು ಹಾಗೂ ಅವರ ಪೋಷಕರು ಈ ತಂಡದಲ್ಲಿ ಇದ್ದರು.ಶ್ರೀಲಂಕಾದಲ್ಲಿ ಸ್ಥಳೀಯವಾಗಿ ಜನಜನಿತವಾಗಿರುವ 18 ವಿವಿಧ ಜನಪದ ನೃತ್ಯ, ಬೌದ್ಧ ಧರ್ಮ ಪ್ರಚಾರದ ಉದ್ದೇಶವನ್ನು ಹೊಂದಿದ ದೀಪದ ನೃತ್ಯವನ್ನು ಅವರು ಪ್ರಸ್ತುತಪಡಿಸಿದರು. ಶ್ರೀಲಂಕಾದ ಧ್ವಜ ಹಿಡಿದು ರಾಷ್ಟ್ರಗೀತೆಗೆ ಹೆಜ್ಜೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಹಿರಿಯ ಪತ್ರಕರ್ತ ಶ್ರೀಪಾದು ಕಾರ್ಯಕ್ರಮ ಉದ್ಘಾಟಿಸಿ, ಭಾರತ ಮತ್ತು ಶ್ರೀಲಂಕಾ ನಡುವಣ ಬಾಂಧವ್ಯವನ್ನು ಸ್ಮರಿಸಿದರು. ಸಂಸ್ಕೃತಿ ಸಂಘಟನೆಯ ಪ್ರಹ್ಲಾದರಾವ್, ಕುಸುಂ ನೃತ್ಯ ಅಕಾಡೆಮಿಯ ಕುಸುಂ ಸಿಂಘಾ ಅವರು   ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.