ಶುಕ್ರವಾರ, ಅಕ್ಟೋಬರ್ 18, 2019
28 °C

ಭಾರತ ಹಾಕಿ ತಂಡದ ಬಗ್ಗೆ ಭಯ ಇದೆ

Published:
Updated:

ನವದೆಹಲಿ (ಪಿಟಿಐ): ಭಾರತ ಹಾಕಿ ತಂಡ ಕಳೆದ ಎರಡು ದಶಕಗಳಲ್ಲಿ ಹೇಳಿಕೊಳ್ಳುವಂತಹ ಸಾಧನೆ ಮಾಡಿಲ್ಲ. ಆದರೂ ವಿದೇಶದ ತಂಡಗಳಿಗೆ ಭಾರತದ ಬಗ್ಗೆ ಈಗಲೂ ಭಯ ಇದೆ ಎಂದು ಕೋಚ್ ಮೈಕಲ್ ನಾಬ್ಸ್ ಹೇಳಿದ್ದಾರೆ.ಇಲ್ಲಿ ನಡೆಯುತ್ತಿರುವ ಭಾರತ ತಂಡದ ಆಟಗಾರರ ಎರಡನೇ ಹಂತದ ತರಬೇತಿ ಶಿಬಿರವನ್ನು ನೋಡಿಕೊಳ್ಳುತ್ತಿರುವ ನಾಬ್ಸ್, `ಭಾರತ ಲಂಡನ್ ಒಲಿಂಪಿಕ್‌ಗೆ ಅರ್ಹತೆ ಗಿಟ್ಟಿಸುತ್ತದೆ~ ಎಂಬ ವಿಶ್ವಾಸ ವ್ಯಕ್ತಪಡಿಸಿದರು.`ಕಳೆದ ಕೆಲ ವರ್ಷಗಳಿಂದ (1980ರ ಮಾಸ್ಕೊ ಒಲಿಂಪಿಕ್ ಚಿನ್ನದ ಬಳಿಕ) ಭಾರತ ತಂಡ ಯಾವುದೇ ಪ್ರಮುಖ ಸಾಧನೆ ಮಾಡಿಲ್ಲ. ಆದರೂ ಅಂತರರಾಷ್ಟ್ರೀಯ ತಂಡಗಳಿಗೆ ಭಾರತವೆಂದರೆ ಭಯ ಇದ್ದೇ ಇದೆ~ ಎಂದು ಮೊದಲ ದಿನದ ತರಬೇತಿಯ ಬಳಿಕ ತಿಳಿಸಿದರು.

Post Comments (+)