ಭಾರತ ‘ಎ’ ಮುಡಿಗೆ ಸರಣಿ

7
ಕ್ರಿಕೆಟ್‌: ಮತ್ತೆ ಮಿಂಚಿದ ಮನಾರಿಯಾ, ನ್ಯೂಜಿಲೆಂಡ್‌ಗೆ ಮುಖಭಂಗ

ಭಾರತ ‘ಎ’ ಮುಡಿಗೆ ಸರಣಿ

Published:
Updated:

ವಿಶಾಖ ಪಟ್ಟಣ (ಪಿಟಿಐ): ಅಶೋಕ್‌ ಮನಾರಿಯಾ ಮತ್ತು ಕೇದಾರ್‌ ಜಾಧವ್‌ ಅರ್ಧ ಶತಕದ ನೆರವಿನಿಂದ ಭಾರತ ‘ಎ’ ತಂಡ ನ್ಯೂಜಿಲೆಂಡ್‌ ‘ಎ’ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಕ್ರಿಕೆಟ್‌ ಪಂದ್ಯದಲ್ಲಿ ಎರಡು ವಿಕೆಟ್‌ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡಿತು.ವೈ.ಎಸ್‌. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 290 ರನ್‌  ಕಲೆ ಹಾಕಿತು. ಈ ಸವಾಲಿನ ಮೊತ್ತ  ಆತಿಥೇಯರಿಗೆ ಆರಂಭದಲ್ಲಿ ಕಷ್ಟವೆನಿಸಿತಾದರೂ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ಬಲ ಭಾರತದ ಗೆಲುವಿಗೆ ಕಾರಣವಾಯಿತು. ಈ ತಂಡ ನಾಲ್ಕು ಎಸೆತಗಳ ಬಾಕಿ ಇರುವಾಗಲೇ ಗುರಿ ತಲುಪಿತು.ಆರಂಭದಲ್ಲಿ ವಿಕೆಟ್‌ ಕಳೆದುಕೊಂಡು ಪರದಾಡಿದ ಕಿವೀಸ್‌ ತಂಡಕ್ಕೆ ಆ್ಯಂಟನ್ ಡೆವಿಚಿಕ್‌  (66, 85ಎಸೆತ, 8 ಬೌಂಡರಿ) ಆಸರೆಯಾದರು. ಮಧ್ಯಮ ಕ್ರಮಾಂಕದ ಕ್ಯಾರಿ ಜೆ. ಆ್ಯಂಡರ್‌ಸನ್‌ ಮತ್ತು ಟಾಮ್‌ ಲಾಥಮ್‌ ಅರ್ಧ ಶತಕ ಸಿಡಿಸಿ ತಂಡವನ್ನು ಅಪಾಯದಿಂದ  ಪಾರು ಮಾಡಿದರು. ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ ಈ ಜೋಡಿ 91 ರನ್‌ ಕಲೆ ಹಾಕಿದ್ದರಿಂದ ಸವಾಲಿನ ಮೊತ್ತ ಗಳಿಸಲು ಸಾಧ್ಯವಾಯಿತು.ಕಠಿಣ ಗುರಿ ಮುಟ್ಟುವ ಹಾದಿಯಲ್ಲಿ ಭಾರತಕ್ಕೂ ಆರಂಭಿಕ ಆಘಾತ ಎದುರಾಯಿತು. ಹಿಂದಿನ ಎರಡೂ ಪಂದ್ಯಗಳಲ್ಲಿ ಕ್ರಮವಾಗಿ 94 ಮತ್ತು 54 ರನ್‌ ಗಳಿಸಿದ್ದ ನಾಯಕ ಉನ್ಮುಕ್ತ್ ಚಾಂದ್‌ ಈ ಪಂದ್ಯದಲ್ಲಿ 11 ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡರು. ಆದರೆ, ಕರ್ನಾಟಕದ ರಾಬಿನ್‌ ಉತ್ತಪ್ಪ (46, 50 ಎಸೆತ, 6 ಬೌಂಡರಿ, 1 ಸಿಕ್ಸರ್‌) ಆಸರೆಯಾದರು.42 ರನ್‌ ಕಲೆ ಹಾಕುವ ಅಂತರದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡ ಭಾರತ ಸೋಲುವ ಭೀತಿ ಎದುರಿಸಿತ್ತು. ಆದರೆ, ಮಹಾರಾಷ್ಟ್ರದ ಕೇದಾರ್‌ ಜಾಧವ್‌ (57, 61ಎಸೆತ, 5 ಬೌಂಡರಿ, 2 ಸಿಕ್ಸರ್‌) ಮತ್ತು ಮನಾರಿಯಾ (69, 50ಎಸೆತ, 2 ಬೌಂಡರಿ, 8 ಸಿಕ್ಸರ್‌) ಇದಕ್ಕೆ ಅವಕಾಶ ನೀಡಲಿಲ್ಲ. ಇವರು  ಐದನೇ ವಿಕೆಟ್‌ ಜೊತೆಯಾಟದಲ್ಲಿ 107 ಎಸೆತಗಳಲ್ಲಿ 128 ರನ್‌ ಕಲೆ ಹಾಕಿ ಕಮರಿ ಹೋಗುತ್ತಿದ್ದ ಭಾರತದ ಗೆಲುವಿನ ಆಸೆಗೆ ಜೀವ ತುಂಬಿದರು.ಎರಡನೇ ಪಂದ್ಯದಲ್ಲಿ ಮನಾರಿಯಾ ಐದು ವಿಕೆಟ್‌ ಪಡೆದು 37 ರನ್ ಗಳಿಸಿದ್ದರು. ಈ ಪಂದ್ಯದಲ್ಲೂ ರಾಜಸ್ತಾನದ ಆಟಗಾರನಿಂದ ಆಲ್‌ರೌಂಡ್‌ ಆಟ ಮೂಡಿ ಬಂತು. ಕೊನೆಯಲ್ಲಿ ಮನ್‌ದೀಪ್‌ ಸಿಂಗ್ ಔಟಾಗದೆ 37 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.ಸಂಕ್ಷಿಪ್ತ ಸ್ಕೋರು

ನ್ಯೂಜಿಲೆಂಡ್‌ ‘ಎ’ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 290. (ಆ್ಯಂಟನ್ ಡೆವಿಚಿಕ್‌ 66, ಕಾರ್ಲ್‌ ಚೊಕೊಪ್‌ 33, ಕ್ಯಾರಿ ಜೆ. ಆ್ಯಂಡರ್‌ಸನ್‌ 59, ಟಾಮ್‌ ಲಾಥಮ್‌ 53; ಬಸಂತ್‌ ಮೊಹಾಂತಿ 39ಕ್ಕೆ2, ಜಲಜ್‌ ಸಕ್ಸೇನಾ 60ಕ್ಕೆ2, ರಾಹುಲ್‌ ಶರ್ಮ 48ಕ್ಕೆ1, ಅಶೋಕ್‌ ಮೆನಾರಿಯಾ 45ಕ್ಕೆ2).ಭಾರತ ‘ಎ’: 49.2 ಓವರ್‌ಗಳಲ್ಲಿ 8 ವಿಕೆಟ್‌ಗೆ 291. (ರಾಬಿನ್ ಉತ್ತಪ್ಪ 46, ಉನ್ಮುಕ್ತ್‌ ಚಾಂದ್‌ 11, ಸಚಿನ್‌ ಬೇಬಿ 16, ಕೇದಾರ್ ಜಾಧವ್‌ 57, ಅಶೋಕ್‌ ಮೆನಾರಿಯಾ 69, ಮನ್‌ದೀಪ್‌ ಸಿಂಗ್‌ ಔಟಾಗದೆ 37, ರಾಹುಲ್‌ ಶರ್ಮಾ 20; ಮಾರ್ಕ್‌ ಗಿಲೆಪ್ಸೆಯಿ 43ಕ್ಕೆ3). ಫಲಿತಾಂಶ: ಭಾರತಕ್ಕೆ 2 ವಿಕೆಟ್ ಗೆಲುವು ಹಾಗೂ 3–0ರಲ್ಲಿ ಸರಣಿ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry