ಭಾರಿ ಬೆಲೆ ಪಡೆದ ಅಶ್ವಿನಿ ಪೊನ್ನಪ್ಪ

7

ಭಾರಿ ಬೆಲೆ ಪಡೆದ ಅಶ್ವಿನಿ ಪೊನ್ನಪ್ಪ

Published:
Updated:

ಬೆಂಗಳೂರು: ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಅಶ್ವಿನಿ ಪೊನ್ನಪ್ಪ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್)ನ ಸ್ಪರ್ಧಿಗಳ ಹರಾಜಿನಲ್ಲಿ `ಬೆಲೆಯುಳ್ಳ ಆಟಗಾರ್ತಿ~ ಎನಿಸಿದ್ದಾರೆ. ಕರ್ನಾಟಕ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಸೋಮವಾರ ನಡೆದ ಹರಾಜು ಪ್ರಕ್ರಿಯೆಯಲ್ಲಿ ಆರಾಟ್ ಫೈಟರ್ಸ್ ತಂಡ 2.5 ಲಕ್ಷ ರೂ. ಮೊತ್ತಕ್ಕೆ ಅಶ್ವಿನಿ ಅವರನ್ನು ತನ್ನದಾಗಿಸಿಕೊಂಡಿದೆ.ಕೆಬಿಎ ಸಿದ್ಧಪಡಿಸಿದ್ದ ಸ್ಪರ್ಧಿಗಳ ಹರಾಜು ಪಟ್ಟಿಯಲ್ಲಿ ಅಶ್ವಿನಿ ಇರಲಿಲ್ಲ. ಆದರೆ ಈ ಆಟಗಾರ್ತಿಯನ್ನು ಪಡೆಯಲು ಸ್ವತಂತ್ರವಾಗಿ ಬಿಡ್ ಸಲ್ಲಿಸುವ ಅವಕಾಶವನ್ನು ಫ್ರಾಂಚೈಸಿಗಳಿಗೆ ನೀಡಲಾಗಿತ್ತು. ಹರಾಜಿನಲ್ಲಿ ಆರಾಟ್ ಫೈಟರ್ಸ್ ದೊಡ್ಡ ಮೊತ್ತ ನೀಡಿ ಅವರನ್ನು ಖರೀದಿಸಿದೆ.

 

`ಅಶ್ವಿನಿ ತಂಡಕ್ಕೆ ಉತ್ತೇಜನ ನೀಡಲಿದ್ದಾರೆ~ ಎಂದು ಹರಾಜಿನಲ್ಲಿ ಆರಾಟ್ ಫೈಟರ್ಸ್‌ನ್ನು ಪ್ರತಿನಿಧಿಸಿದ ವಿಶಾಲ್ ವಿನ್ಸೆಂಟ್ ಟೋನಿ ತಿಳಿಸಿದ್ದಾರೆ. ಅಶ್ವಿನಿ ಕೆಬಿಎಲ್‌ನಲ್ಲಿ ನವೆಂಬರ್ 5 ರಿಂದ 12ರ ವರೆಗೆ ಮಾತ್ರ ಲಭ್ಯರಿದ್ದು, ಮಿಶ್ರ ಡಬಲ್ಸ್‌ನಲ್ಲಿ ಆಡಲಿದ್ದಾರೆ. ಸೋಮವಾರ ನಡೆದ ಹರಾಜಿನಲ್ಲಿ ರೋಹನ್ ಕ್ಯಾಸ್ಟಲಿನೊ (78,000ರೂ.; ಆರಾಟ್ ಫೈಟರ್ಸ್), ರಿಷಿಕೇಶ್ ಯೆಲಿಗಾರ್ (40,000), ಫಲ್ಗುಣ್ (44,000), ಡಿ. ಗುರು ಪ್ರಸಾದ್ (45,000), ಎಂ. ಸಂಜೀತ್ (50,000 ಎಲ್ಲರೂ ಎಚ್‌ಬಿ ಚಾಲೆಂಜರ್ಸ್), ಜಗದೀಶ್ ಯಾದವ್ (50,000), ರೇಷ್ಮಾ ಕಾರ್ತಿಕ್ (76,000; ಇಬ್ಬರೂ ವೈಟ್ ಪಿಕಾಕ್), ಆದರ್ಶ್ ಕುಮಾರ್ (72,000), ವೆಂಕಟೇಶ್ ಪ್ರಸಾದ್ (45,000), ನಿತ್ಯಾ ಸೋಸಲೆ (36,000), ಸೋನಿಕ್ ಪ್ರಭುದೇಸಾಯಿ (36,000; ಎಲ್ಲರೂ ಲಿ ನಿಂಗ್ ಲಯನ್ಸ್), ಅಭಿಷೇಕ್ ಯೆಲಿಗಾರ್ (74,000), ಲೀಲಾ ಲಕ್ಷ್ಮಿ (30,000; ಕೆ2 ಸ್ಮ್ಯಾಷರ್ಸ್), ರಜಸ್ ಜವಾಲ್ಕರ್ (66,000), ಸಿಂಧು ಭಾರದ್ವಾಜ್ (45,000), ಕೃಷ್ಣ ಎಸ್.ಡಿ.ಎಸ್ (60,000; ಫ್ಲೈ ಪವರ್ ವಾರಿಯರ್ಸ್), ಮೋಹಿತ್ ಕಾಮತ್ (76,000), ಮಹಿಮಾ ಅಗರ್‌ವಾಲ್ (45,000), ವಿನೀತ್ ಮ್ಯಾನುಯೆಲ್ (68,000; ಎಬಿ ಚಾರ್ಜರ್ಸ್) ಹೆಚ್ಚಿನ ಬೆಲೆ ಪಡೆದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry