ಮಂಗಳವಾರ, ಏಪ್ರಿಲ್ 20, 2021
24 °C

ಭಾರಿ ಮಳೆಗೆ ಕುಸಿದ ಮನೆಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಡೂರು: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಭಾರಿ ಮಳೆ ಯಿಂದಾಗಿ ತಾಲ್ಲೂಕಿನ ತಾರಾನರ ಗ್ರಾಮದಲ್ಲಿ ಎರಡು ಮಣ್ಣಿನ ಮನೆಗಳು ಕುಸಿದಿದ್ದು, ಅದೃಷ್ಟವ ಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಂಡೂರು, ಚೋರ ನೂರು, ಯಶವಂತನಗರ, ಮತ್ತಿತರ ಭಾಗಗಳಲ್ಲಿ ಭಾರಿ ಮಳೆ, ಗಾಳಿಯ ಹೊಡೆತಕ್ಕೆ ಸಿಲುಕಿ ಕೆಲವು ಮರಗಳು ನೆಲಕಚ್ಚಿವೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.ಹೊಸಳ್ಳಿ, ಸುಶೀಲಾನಗರ ಮತ್ತಿತರ ಭಾಗದಲ್ಲಿ ಕೊಳವೆ ಬಾವಿ ನೀರಾವರಿ ಆಶ್ರಿತ  ಹಾಗೂ ಮಳೆ ಯಾಶ್ರಿತ ಪ್ರದೇಶಗಳಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಯೂ ನೆಲಕಚ್ಚಿದೆ. ಸಂಡೂರಿನಲ್ಲಿ 60 ಮಿಮೀ, ಚೋರನೂರಿನಲ್ಲಿ 44 ಮಿಮೀ, ಕುರೇಕುಪ್ಪದಲ್ಲಿ 22 ಮಿಮೀ ಮಳೆ ಸುರಿದ ವರದಿಯಾಗಿದೆ. ಮಳೆಯಿಂ ದಾಗಿ ಬುಧವಾರ ಮಧ್ಯರಾತ್ರಿ ಯಿಂದಲೇ ಪಟ್ಟಣವೂ ಒಳಗೊಂ ಡಂತೆ ತಾಲ್ಲೂಕಿನ ವಿವಿಧೆಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವಸ್ತಗೊಂಡಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.